ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ತಡೆ


ವರದಿ: ವಿಠ್ಠಲ ಕೆಳೂತ್

ಮಸ್ಕಿ: ತಾಲೂಕಿನ ದಿಗ್ಗನಾಯಕನಭಾವಿ ಹತ್ತಿರದ ಹಿರೇ ಹಳ್ಳದಲ್ಲಿ ನಿರ್ಮಿಸುತ್ತಿರುವ ಚೆಕ್ ಡ್ಯಾಂ ಕಾಮಗಾರಿ ಈ ಕೂಡಲೇ ನಿಲ್ಲಿಸುವಂತೆ ಹೈಕೋರ್ಟ್ ತಡೆ ನೀಡಿದೆ.


ಕೃಷ್ಣ ಭಾಗ್ಯ ಜಲ‌ ನಿಗಮದಿಂದ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚೆಕ್‌ ಡ್ಯಾಂ‌ ಕಾಮಗಾರಿ ಅವೈಜ್ಞಾನಿಕವಾಗಿದ್ದು. ಈ ಕೂಡಲೇ ಸ್ಥಗಿತಗೊಳಸಬೇಕೆಂದು ದಿಗ್ಗನಾಯಕನಭಾವಿ ಗ್ರಾಮದ ರೈತ ಅಮರೇಗೌಡ ಗುಲ್ಬರ್ಗದ ಪೀಠದ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.


ಮಾರಲದಿನ್ನಿ ಜಲಾಶಯದ ಹಿರೇ ಹಳ್ಳದ ದಿಗ್ಗನಾಯಕನಭಾವಿ ಹತ್ತಿರ ಚೆಕ್ ಡ್ಯಾಂ ಕಾಮಗಾರಿ ನಿರ್ಮಾಣ ಮಾಡುತ್ತಿದ್ದು, ಈ ಕಾಮಗಾರಿಯಿಂದ ಕೆಳಭಾಗದ ರೈತರಿಗೆ ತೊಂದರೆ ಆಗಲಿದೆ. ರೈತ-ರೈತರ ನಡುವೆ ಸಂಘರ್ಷವಾಗಲಿದೆ. ಹಳ್ಳವನ್ನೆ ನಂಬಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.
ತಾಲೂಕಿನ ಬೆಲ್ಲದಮರಡಿ ಹತ್ತಿರದ ಹಳ್ಳದಲ್ಲಿ ಚೆಕ್ ಡ್ಯಾ ನಿರ್ಮಿಸಿದರೆ ಈ ಭಾಗದ ವೆಂಕಟಾಪೂರ, ಬೆನಕನಾಳ, ಬೆಲ್ಲದಮರಡಿ, ದಿಗ್ಗನಾಯಕನಭಾವಿ ಭಾವಿ ಗ್ರಾಮದ ರೈತರಿಗೆ ಅನುಕೂಲವಾಗಲಿದೆ.‌ಈ ಕಾಮಗಾರಿಯನ್ನು ಕೂಡಲೇ ತಡೆ ಹಿಡಿಯುವಂತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.‌
ರೈತನ ಮನವಿಗೆ ಸ್ಪಂದಿಸಿ ಅವೈಜ್ಞಾನಿಕ ಚೆಕ್ ಡ್ಯಾಂ ಕಾಮಗಾರಿ ನಿಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಕಾಮಗಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ, ಇಂಜಿನಿಯರ್ ‌ಗಳಿಗೆ ಉಚ್ಚ ನ್ಯಾಯಾಲಯದಿಂದ ತಡೆ ಬಂದಿದೆ ಎಂದು ರೈತ ಅಮರೇಗೌಡ, ಹಜರತ್ ಸಾಬ ತಿಳಿಸಿದ್ದಾರೆ.

Exit mobile version