ಶಿಗ್ಲಿ ನಾಕಾಯಿಂದ – ಲಕ್ಷ್ಮೇಶ್ವರ ತಾಲೂಕಿನ ಸರಹದ್ದಿನವರೆಗೂ ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

 ಉತ್ತರಪ್ರಭ

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ನಾಕಾಯಿಂದ – ಲಕ್ಷ್ಮೇಶ್ವರ ತಾಲೂಕಿನ ಸರಹದ್ದಿನವರೆಗೂ ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ತಾಲೂಕ ಹಾಗೂ ಗದಗ ಜಿಲ್ಲಾ ಘಟಕದವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಪಟ್ಟಣದ ಶಿಗ್ಲಿ ನಾಕಾದಿಂದ ಐಟಿಐ ಕಾಲೇಜ್ ವರೆಗೂ ರಾಜ್ಯ ಹೆದ್ದಾರಿ ರಸ್ತೆಯು ತುಂಬಾ ಹದಗೆಟ್ಟು ಹೋಗಿದೆ ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಕಾರ್ಯಕರ್ತರು ರಸ್ತೆ ತಡೆದು ಕಾರ್ಯನಿರ್ವಾಹಕ ಅಭಿಯಂತರರಾದ ಡಿ, ಬಿ,ನರೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಹೆದ್ದಾರಿ ಸುಮಾರು ದಿನಗಳಿಂದ ಹದಗೆಟ್ಟು ಹೋಗದ್ದು ವಾಹನ ಸವಾರ ಸಂಚಾರಕ್ಕೆ ಸಂಚಕಾರ ವಾಗಿದ್ದು ಬಹಳ ಅಪಘಾತಗಳು ಸಂಭವಿಸಿದ್ದು ಇದಕೆಲ್ಲ ಕಾರಣ ರಸ್ತೆ ಮೇಲೆ ಇರುವಂತಹ ದೊಡ್ಡ ದೊಡ್ಡ ಗುಂಡಿಗಳು ಆದ್ದರಿಂದ ಈ ರಸ್ತೆಯನ್ನು ಬೇಗನೇ ದುರಸ್ಥಿ ಗೊಳಿಸಬೇಕು-ನೀಲಪ್ಪ ಪಡಗೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುರೇಶ್ ಹಟ್ಟಿ ತಾಲೂಕ ಅದ್ಯಕ್ಷ ಲಕ್ಷ್ಮೇಶ್ವರ.

ಈ ಸಂದರ್ಭದಲ್ಲಿ ಮಾತನಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಪ್ಪ ಪಡಿಗೇರಿ ಮಾತನಾಡಿ ಪಾಳಾ- ಬದಾಮಿ ರಸ್ತೆ ಹೈವೇ ಆಗಿದ್ದು ಈ ರಸ್ತೆಯಿಂದ ದಿನನಿತ್ಯ ಅನೇಕ ವಾಹನಗಳ ರೈತರ ಚಕ್ಕಡಿಗಳು ಶಾಲಾ ವಿದ್ಯಾರ್ಥಿಗಳು ವೃದ್ಧರು ಮಹಿಳೆಯರು ಓಡಾಡುತ್ತಾರೆ ಹಾಗೂ ರಸ್ತೆಯಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ ಬೈಕುಗಳು ಸಹ ಸ್ಕಿಡ್ ಆಗಿ ಬಿದ್ದು ಭೀಕರ ಗಾಯಗೊಂಡು ಕೆಲವು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ರಸ್ತೆಯಲ್ಲಿ ಡಾಂಬರ್ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಕಲ್ಲು – ಮಣ್ಣು ಎದ್ದು ಕಾಣುತ್ತಿವೆ. ಈ ಪ್ರದೇಶದಲ್ಲಿ ಧೂಳು ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರು ಅನೇಕ ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. ಈಗಲಾದರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಕೂಡಲೇ ರಸ್ತೆ ಡಾಂಬರೀಕರಣ ಮಾಡಬೇಕೆಂದು

ಈಗಾಗಲೇ ಈ ರಾಜ್ಯ ಹೆದ್ದಾರಿಗೆ 2.50ಲಕ್ಷ ಅನುದಾನ ಮಂಜೂರಾಗಿದ್ದು ಟೆಂಡರ್ ಕರೆಯಬೇಕಾಗಿದೆ ನೀತಿ ಸಂಹಿತೆ ಇರುವುದರಿಂದ ಕರೆಯಲಿಕ್ಕೆ ಆಗಿರಲಿಲ್ಲ 16 ನೇ ತಾರೀಖ ನಂತರ ಟೆಂಡರ್ ಕರೆಯಲಾಗುವುದು ಅಲ್ಲಿವರೆಗೆ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ದಿನಾಲು ಎರಡು ಬಾರಿ ನೀರನ್ನು ರೋಡಿಗೆ ಸಿಂಪಡಿಸಲಾಗುವುದು -ಡಿ.ಬಿ.ನರೇಂದ್ರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.


ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಡಿ.ಬಿ.ನರೇಂದ್ರ ಹಾಗೂ ಸಹಾಯಕ ಇಂಜಿನಿಯರ್ ಫಕ್ಕೀರೇಶ ತಿಮ್ಮಾಪೂರ ಅವರಿಗೆ ಪ್ರತಿಭಟನಾಕಾರರು ಕೆಲಕಾಲ ತರಾಟೆಗೆ ತೆಗೆದುಕೊಂಡರು. ಲಕ್ಷ್ಮೇಶ್ವರ ತಾಲೂಕಿನ ಪೋಲಿಸ್ ಇಲಾಖೆ ಸಿಪಿಐ ವಿಕಾಶ ಲಮಾಣಿ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಬಂದೋಬಸ್ತ್ ನೀಡಿತು.

Exit mobile version