ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ -ಡಾ.ಎಸ್ ಬಾಲಾಜಿ

ಗದಗ: ವಿಶ್ವವಿದ್ಯಾಲಯಗಳು ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ ಹಾಗೂ ದಾಖಲೀಕರಣದ ಕಾರ್ಯಗಳನ್ನು ನಿಲ್ಲಿಸಿರುವುದು ವಿಷಾದನೀಯ ಎಂದು ರಾಜ್ಯಾಧ್ಯಕ್ಷ ಡಾ ಬಾಲಾಜಿ ಅಭಿಪ್ರಾಯ ಪಟ್ಟರು. ರಾಜ್ಯದಲ್ಲಿ ಜಾನಪದಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯಗಳು ಜಾನಪದ ಕೃಷಿಯನ್ನು ಹಾಗೂ ಕಲೆ-ಕಲಾವಿದರ ಸಂರಕ್ಷಣೆ ಮರೆತಿರುವುದು ಮುಂದಿನ ಪೀಳಿಗೆಗೆ ಜಾನಪದವನ್ನು ಉಳಿಸುವ ಕಾರ್ಯದಲ್ಲಿ ಹಿನ್ನಡೆಯಾಗಿದೆ ಎಂದು ತಿಳಿಸಿದರು ಜಾನಪದ ಸಾಹಿತ್ಯ ವಿಶ್ವದಲ್ಲೇ ಶ್ರೇಷ್ಠ ಸಾಹಿತ್ಯ ,ಯುವ ಸಮುದಾಯ ಆಧುನಿಕತೆಯ ಅಬ್ಬರ, ಪಾಶ್ಚಾತ್ಯ ಸಂಸ್ಕೃತಿಗೆ ಅಂಟಿ ಕೊಳ್ಳುವ ಮೂಲಕ ಜಾನಪದ ಕಲೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿ ಕಲೆಯ ಬೆನ್ನು ಹತ್ತಿದವರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ ನಮ್ಮ ಜಾನಪದ ಕಲೆಗಳು ಉಳಿಯಬೇಕಾದರೆ ಸರಕಾರ ಆರ್ಥಿಕ ನೆರವು ನೀಡಿ ಸೂಕ್ತ ಪ್ರೋತ್ಸಾಹ ನೀಡಬೇಕು ಇಲ್ಲವಾದಲ್ಲಿ ಕಲೆಗಳಿಗೆ ಮತ್ತು ಕಲಾವಿದರಿಗೆ ಉಳಿಗಾಲವಿಲ್ಲವೆಂದು ನಮ್ಮ ಜನಪದರು ಬದುಕಿದ ರೀತಿ-ನೀತಿಗಳು ಬದುಕಿನ ಶ್ರಮವನ್ನು ಈಗಒಳಗೊಂಡ ಹಾಡುಗಳನ್ನು ಕಟ್ಟಿದರು ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಇಂದಿನ ತಲೆಮಾರಿಗೆ ತೋರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಅವರು ಗದಗ ನಗರದ ಬಣ್ಣದ ಮನೆ ಆರ್ಟ್ ಅಡ್ಡಾದ ಸಾಂಸ್ಕೃತಿಕ ಭವನದಲ್ಲಿ ನವ್ಹಂಬರ ೨೮ರಂದು ಕನ್ನಡ ಜಾನಪದ ಪರಿಷತ್ ಗದಗ ವತಿಯಿಂದ ಜರುಗಿದ,”ಕನ್ನಡ ಜಾನಪದ ಸಂಭ್ರಮ”-ಕಲಾವಿದರಿಗೆ ಗೌರವ ಪುರಸ್ಕಾರ ಮತ್ತು ಜನಪದೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡ ರವಿಕಾಂತ್ ಅಂಗಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ ಅವರು ಮಾತನಾಡಿ ನಮ್ಮ ದೇಶ,ನಮ್ಮ ನಾಡಿನ ಮೂಲ ಸಂಸ್ಕೃತಿ ಪರಂಪರೆಯಾಗಿ ಜಾನಪದದಿಂದ ಕನ್ನಡ ಭಾಷೆ, ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗುತ್ತದೆ .ಹಾಗಾಗಿ ಇದು ಹೃದಯ ಶ್ರೀಮಂತಿಕೆ ಮಾಡುವ ಶಿಷ್ಟ ಸಾಹಿತ್ಯಕ್ಕೆ ತಾಯಿ ಬೇರಾಗಿ ಕಾರ್ಯನಿರ್ವಹಿಸುತ್ತದೆ ಎಂದರಲ್ಲದೆ ಜಿಲ್ಲೆಯಲ್ಲಿ ಜನಪದ ಪರಿಷತ್ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಾಜ್ಯಾಧ್ಯಕ್ಷ ಡಾ ಬಾಲಾಜಿ , ರವಿಕಾಂತ್ ಅಂಗಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ , ಜಿಲ್ಲಾಧ್ಯಕ್ಷ ಡಾ ಶಾಂತಕುಮಾರ್ ಬಜಂತ್ರಿ ಮತ್ತು ಕಲಾವಿದರು ಕಾರ‍್ಯಕ್ರಮ ಉಧ್ಘಾಟಿಸಿದರು

ಇನ್ನೋರ್ವ ಅತಿಥಿ ಪಿ. ಪಿ .ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರ ಬಿ.ಎ.ಹಿತ್ತಲಮನಿ ಮಾತನಾಡಿ ನಮ್ಮ ನಾಡಿನ ಪುರಾತನ ಸಾಂಪ್ರದಾಯಿಕ ಜಾನಪದ ಸೊಬಗು ಇಂದಿನ ಯುವ ಪೀಳಿಗೆಗೆ ಕಟ್ಟು ಕಥೆಯಂತೆ ಭಾಸವಾಗಬಹುದು ಆದರೆ ಜಾನಪದ ಎಂಬುದು ವಾಸ್ತವ ಸತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ ಶಾಂತಕುಮಾರ್ ಬಿ ಭಜಂತ್, ಜಾತಿ, ಧರ್ಮ ,ವರ್ಗ ವರ್ಣರಹಿತ, ವಯಸ್ಸಿನ ಭೇದವಿಲ್ಲದ ಕಲೆ ಜಾನಪದವಾಗಿದೆ ಇಂದು ಕಲೆ ಮತ್ತು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು ಅವರಿಗೆ ದೊರೆಯಬೇಕಾದ ಗೌರವ ,ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅವರನ್ನು ಸದಾ ಜೀವಂತಗೊಳಿಸುವಲ್ಲಿ ಪರಿಷತ್ ನಿರಂತರವಾಗಿ ಶ್ರಮಿಸುತ್ತಾ ಬರುತ್ತಿದೆ ಜಾನಪದ ಉಳಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದರಾದ ಮಲ್ಲಪ್ಪ ಬಸಪ್ಪ ಹೊನಗಣ್ಣವರ ಜಂತ್ಲಿಶಿರೂರ, ಸುರೇಶ್ ಬಣಗಾರ ಮುಂಡರಗಿ, ಕಲ್ಲಪ್ಪ ಬಣವಿ ಲಕ್ಕುಂಡಿ ಮತ್ತು ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಯವರನ್ನು ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಜನಪದ ಕಲಾವಿದರಾದ ಮಲ್ಲಪ್ಪ ಬಸಪ್ಪ ಹೊನಗಣ್ಣವರ ಜಂತ್ಲಿಶಿರೂರ, ಸುರೇಶ್ ಬಣಗಾರ ಮುಂಡರಗಿ, ಕಲ್ಲಪ್ಪ ಬಣವಿ ಲಕ್ಕುಂಡಿ ಮತ್ತು ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಯವರನ್ನು ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು


ಜನಪದೋತ್ಸವದ ಸಂಭ್ರಮದಲ್ಲಿ ಮುಂಡರಗಿಯ ಕರ್ನಾಟಕ ಜಾನಪದ ಕಲಾತಂಡ, ಜಂತ್ಲಿಶಿರೂರಿನ ಅಣ್ಣಪ್ಪ ಧರಣಿ ಮತ್ತು ತಂಡ, ಅಸುಂಡಿಯ ಶ್ರೀ ಪುಟ್ಟರಾಜ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ, ಲಕ್ಕುಂಡಿಯ ಜ್ಞಾನಪರಂಪರೆ ಜಾನಪದ ಕಲಾತಂಡ,ಪಾಪನಾಶಿ ತಾಂಡಾದ ಜಾನಪದ ಕೋಗಿಲೆ ಶ್ರೀಮತಿ ಸಾವಿತ್ರಿ ಲಮಾಣಿ,ಹೊಸಳ್ಳಿಯ ಶಿಕ್ಷಕ ಕಲಾವಿದ ಡಿ .ಸಿ.ನದಾಫ, ಹಾಗೂ ಇತರರಿಂದ ಕಾರ್ಯಕ್ರಮಗಳು ಜರುಗಿ ಕಲಾ ಪ್ರೇಕ್ಷಕರ ಗಮನ ಸೆಳೆದು ಜನಮನ್ನಣೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಚಿತ್ರ ಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಜಯ ಕಿರೇಸೂರ, ಕಲಾವಿದರಾದ ಶಿವು ಭಜಂತ್ರಿ, ಶ್ರೀಮತಿ ಕಾಶಮ್ಮ ಭಜಂತ್ರಿ,ಕಜಾಪ ತಾಲೂಕ ಘಟಕದ ಅಧ್ಯಕ್ಷರಾದ ಸಿ.ಬಿ.ಮಾಳಗಿ,ಶರಣಪ್ಪ ಕುಬಸದ,ಸಂಗಮೇಶ ಹಾದಿಮನಿ, ಹಿರಿಯರಾದ ರಾಜೇಸಾಬ ನದಾಫ,ಪ್ರೊ ಶಕುಂತಲಾ ಚ ಸಿಂಧೂರ, ಬಸವರಾಜ ಈರಣ್ಣವರ,ಶ್ರೀಮತಿ ಸುನೀತಾ ಕಿರೇಸೂರ,ಪ್ರೀಯಾ ಅಗಸಿಮನಿ,ಎ. ಎ . ನದಾಫ, ಅಪೂರ್ವ ಭಜಂತ್ರಿ,ನಂದಾ ಬೆಂತೂರ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರ ಸಮಾರಂಭ
ಜಿಲ್ಲಾ ಕನ್ನಡ ಜಾನಪದ ಪರಿಷತ್ ಸದಸ್ಯರಾದ ಪ್ರೊ ಶಕುಂತಲಾ .ಚ. ಸಿಂಧೂರ ಪ್ರಾಸ್ತಾವಿಕವಾಗಿ ಮಾತನಾಡಿದರು,ಕಲಾವಿದರು ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ ಈರಣ್ಣವರ ಕಾರ್ಯಕ್ರಮ ನಡೆಸಿಕೊಟ್ಟರು,ಕಜಾಪ ಗದಗ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನಬಸಪ್ಪ ಬಿ ಮಾಳಗಿ ವಂದಿಸಿದರು.

Exit mobile version