ಆನ್ಲೈನ್ ಸಹಾಯದಿಂದ ಯುವಕರಲ್ಲಿ ಜಾನಪದ ಆಸಕ್ತಿ ಮೂಡಿಸುತ್ತಿರುವ ಡಾ.ಬಾಲಾಜಿ

ಬೆಂಗಳೂರು: ಸಾಮಾನ್ಯವಾಗಿ ಜಾನಪದ ಕಲೆ ಎಂದರೆ ನಮ್ಮ ಬಹುತೇಕ ಯುವಕರಿಗೆ ಅದರ ಗಂಭೀರತೆಗಿಂತ ಹಾಸ್ಯ ಹಾಗೂ ವಿಡಂಭನಾತ್ಮಕವಾಗಿ ಬಳುತ್ತಿರುವವರೆ ಹೆಚ್ಚು. ಆದರೆ ಇದಕ್ಕೆ ಜಾನಪದ ಬಾಲಾಜಿ ತದ್ವಿರುದ್ಧ. ಕನ್ನಡ ಜಾನಪದ ಪರಿಷತ್ ಸಂಘಟನೆ ಮೂಲಕ ರಾಜ್ಯದ ಜಾನಪದ ಕಲಾವಿದರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಕನ್ನಡ ಜಾನಪದ ಯುವ ಬ್ರಿಗೇಡಿನ ಮೂಲಕ ಯುವ ಜನಾಂಗವನ್ನು ಎಚ್ಚರಿಸುವ ಹಾಗೂ ಅವರನ್ನು ಜಾನಪದ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಆಪ್ ಸಹಾಯದಿಂದ ಯುವಕರನ್ನು ಸೇರಿಸಿ ಅವರಿಗೆ ಜಾನಪದ ಕಲೆಯ ಸೊಗಡು ಉಣ ಬಡಿಸುವ ಕಾರ್ಯ ಮಾಡುತ್ತಿದ್ದಾರೆ.

ಇಂದು ಆನ್ಲೈನ್ ಮೂಲಕ ನಡೆಸಿದ ಸಭೆಯಲ್ಲಿ 200 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಮೂಲ ಜಾನಪದ ಕಲಾವಿದರು, ಆಸಕ್ತರು ಭಾಗವಹಿಸಿದ್ದರು. ಇದೇ ವೇಳೆ ಯುವಕರಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಮೂಲ ಜಾನಪದ ಕಲಾ ಪ್ರಕಾರಗಳ ಪ್ರದರ್ಶನವನ್ನು ಕೂಡ ಏರ್ಪಡಿಸಿದ್ದರು.

ಹಿರಿಯ ಉಪನ್ಯಾಸಕರು, ವಿದ್ಯಾಂಸರ, ಜನಪರ ಹೋರಾಟಗಾರರನ್ನು ಅತಿಥಿಗಳಾಗಿ ಸೇರಿಸಿಕೊಂಡಿದ್ದರೂ ಒಂದು ಗಂಟೆಗೂ ಅಧಿಕ ಸಮಯದವರೆಗೆ ಸಭೆ ನಡೆಯಿತು.

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕಲಾವಿದರು ಭಾಗವಹಿಸಿ ತಮ್ಮ ಕಲಾಪ್ರದರ್ಶನ ನೀಡಿದರು. ಗದಗ ಜಿಲ್ಲೆಯಿಂದಲೂ ಕೂಡ ಕಲಾವಿದ ಶಿವು ಭಜಂತ್ರಿ ಭಾಗವಹಿಸಿದ್ದರು. ಉತ್ತರ ಕರ್ನಾಟಕ ಮಹಾಸಭಾ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯದೇ ಜಾನಪದ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಡಾ.ಬಾಲಾಜಿ ಅವರಂಥ ವ್ಯಕ್ತಿಗಳನ್ನು ಪಕ್ಷ ಬೇಧ ಮರೆತು ಅಕಾಡೆಮಿಗೆ ಅಧಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

Exit mobile version