ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿದ್ದು. ಪ್ರತಿಷ್ಠಿತ ಬಹುರಾಷ್ಟಿಯ ಟಿಸಿಎಸ್ ಕಂಪನಿಯು ಆನ್ ಲೈನ್ ಮುಖಾಂತರ 07ನೇ ಸೇಮಿಸ್ಟರನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ನಡೆಸಿ ಕಂಪ್ಯೂಟರ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ನವೀನ ದಾಸಪಳ್ಳಿ, ಸುಜಾತಾ ಅಸುಂಡಿ ಇಲೇಕ್ಟಾನಿಕ್ಸ್ ಮತ್ತು ಕಮ್ಯೂನಿಕೆಶನ್ ವಿಭಾಗದ ಪೂರ್ಣಿಮಾ ನಾಯ್ಕ, ಐಶ್ರ‍್ಯ ಜಿ ಎಸ್, ಪ್ರತೀಕ ಜೋಗಿನ, ರಷ್ಮಿ ಜೋಶಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ವಿಭಾಗದ ಇಶಾನ ಅಹ್ಮದ ದುಂದೂರ ಅವರನ್ನು ಆಯ್ಕೆಮಾಡಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರಾದ ಡಾ.ಎಮ್.ಎಮ್ ಅವಟಿ,ಉದ್ಯೋಗ ಮತ್ತು ತರಬೇತಿ ಅಧಿಕಾರಿಗಳಾದ ಪ್ರೋ.ವಿಜಯಕುಮಾರ ಮಾಲಗಿತ್ತಿ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿ,ಶುಭಹಾರೈಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದನ್ನು ಓದಿ: ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
