ಉತ್ತರಪ್ರಭ
ಗದಗ: ತೋಂಟದಾರ್ಯ ಇಂಜೀನಿಯರಿಂಗ್ ಕಾಲೇಜಿನ ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್ ಇನ್ನೋವೆಶನ್ ಇನ್ಕ್ಯೂಬೆಶನ್ ಸೆಲ್ (ಇಐಐಸಿ) ಸಹಯೋಗದೊಂದಿಗೆ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಎಂ ಅವಟಿಯವರು ಭಾಗವಹಿಸಿ ಮಾತನಾಡುತ್ತಾ ಶಕ್ತಿ ಸಂರಕ್ಷಣೆಯನ್ನು ನಾವೇಲ್ಲಾ ಮಾಡಬೇಕಾಗಿದೆ, ಅದರೊಂದಿಗೆ ಸಾಮಾನ್ಯ ಜನರಿಗೆ ಶಕ್ತಿ ಮಹತ್ವ ಮತ್ತು ಅದರ ಬಳಕೆ ಬಗ್ಗೆ ಮಾಹಿತಿ ನೀಡಬೇಕಾದದ್ದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ, ಅದರಲ್ಲೂ ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಸಂತಸದ ಸಂಗತಿ .
ಇಂದಿನ ಯುವಪಿಳಿಗೆ ಶಕ್ತಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಅದರೊಂದಿಗೆ ಪೊಸ್ಟರ ಮತ್ತು ಸ್ಲೋಗನ್ಗಳನ್ನು ಬರೆಯುವ ಸ್ಪರ್ದೆಗಳನ್ನು ಹಮ್ಮಿಕೊಂಡು ಕಾಲೇಜಿನ ಆವರಣದಲ್ಲಿ ಫಲಕಗಳನ್ನು ಹಿಡಿದು ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನವನ್ನು ಆಚರಣೆ ಮಾಡಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಶಕ್ತಿಯ ಮಹತ್ವ ಬಗ್ಗೆ ತಿಳುವಳಿಕೆ ನೀಡಿದಂತಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ.ಈರಣ್ಣ ಕೊರಚಗಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಇಐಐಸಿಯ ಅಧ್ಯಕ್ಷರಾದ ಜಗದೀಶ ಶಿವನಗುತ್ತಿ,ಮಲ್ಲಿಕಾರ್ಜುನ ಜಿ ಡಿ,ಸಂತೋಷ ಕಂದಗಲ್, ಸಂತೋಷ ಜಿಎಮ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
