ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ

tontadarya College of engineering

tontadarya college of engineering Gadag

ಗದಗ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ(KSCST) ಪ್ರಕಟಿಸಿದ ಈ ವರ್ಷದ (2019-20) ಫಲಿತಾಂಶದಲ್ಲಿ, ನಗರದ ಪ್ರತಿಷ್ಠಿತ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಗೈದಿದ್ದಾರೆ.

ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶಿವರಾಜ ಹಿರೇಮಠ, ಪ್ರೀತಿ ಶೆಟ್ಟರ್, ಪ್ರವೀಣ ಆರ್. ಟಿ. ಮತ್ತು ಐಶ್ವರ್ಯ ಸಜ್ಜನ ಇವರು ಮಾಡಲ್ಪಟ್ಟ ಪ್ರಾಜೆಕ್ಟ ಎ ಸಿಂಪಲ್‌ ಹೈ ಎಫಿಸಿಯನ್ಸಿ ಸೊಲಾರ ವಾಟರ್‌ ಪ್ಯೂರಿಫಿಕೇಶನ್‌ ಸಿಸ್ಟಮ್‌ಗೆ ರಾಜ್ಯಮಟ್ಟದ ಅತ್ಯುತ್ತಮ ಪ್ರಾಜೆಕ್ಟ್  ಎಂಬ ಪ್ರಶಸ್ತಿ ಲಭಿಸಿದೆ.

ಪ್ರೊ. ಜಗದೀಶ್ವರ ಜಿ. ಶಿವನಗುತ್ತಿ ಮಾರ್ಗದರ್ಶನದಲ್ಲಿ ಪ್ರಾಜೆಕ್ಟ್ ಸಿದ್ಧಪಡಿಸಲಾಗಿತ್ತು. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶಿ ಪ್ರಾಧ್ಯಾಪಕರನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಸಿದ್ದಾರೆ.

Exit mobile version