ರಾಷ್ಟ್ರಮಟ್ಟದ ಟಿಸಿಇ ನೆಕ್ಷಾಥಾನ್ ಕೊಡಿಂಗ್ ಸ್ಪರ್ಧೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನಲ್ಲಿ 3 ಮತ್ತು   4ನೇ ಡಿಸೆಂಬರ್ 2021 ರಂದು ರಾಷ್ಟ್ರಮಟ್ಟದ ನೆಕ್ಷಾಥಾನ್ ಕೊಡಿಂಗ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು. ಈ ಸ್ಪರ್ಧೆ ವಿಶೆಷವಾಗಿ 24 ತಾಸು ಕೊಡಿಂಗ್ ಮಾಡಿ ತಮ್ಮದೆ ಆದ ರೀತಿಯಲ್ಲಿ ಯಾರು ಕೊಡಿಂಗ್ ಮಾಡಿರುತ್ತಾರೋ ಅವರಿಗೆ ಬಹುಮಾನವನ್ನು ನೀಡಲಾಗುತ್ತದೆ. ರಾಷ್ಟ್ರಮಟ್ಟದ ನೆಕ್ಷಾಥಾನ್ ಕೊಡಿಂಗ್ ಸ್ಪರ್ಧೆಯನ್ನು ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ ವಿಭಾಗ , ಇನ್ನೋವೇಶನ್ ಸೆಲ್ ಮತ್ತು ಹುಬ್ಬಳ್ಳಿಯ ನೆಕ್ಸಎನ್ಸಿಯಲ್ ಸೋಲ್ಯುಸನ್ ಪಾರ್ ನೆಕ್ಷ್ಟ ಜೆನರೇಶನ್, ಹುಬ್ಬಳ್ಳಿ ಇವರುಗಳ ಸಹಯೋಗದೊಂದಗೆ ನಡೆಯಲ್ಲಿದ್ದು, ಆಸಕ್ತ ಇಂಜಿನೀಯರಿಂಗ್ ಕಾಲೇಜುಗಳ  ಎಲ್ಲ ವಿಭಾಗದ ವಿದ್ಯಾರ್ಥಿಗಳು , ಡಿಪ್ಲೋಮಾ ಕಾಲೇಜಿನ  ಎಲ್ಲ ವಿಭಾಗದ ವಿದ್ಯಾರ್ಥಿಗಳು ಮತ್ತು ಬಿಸಿಎ,ಎಮ್ ಸಿ ಎ ವಿದ್ಯಾರ್ಥಿಗಳು  ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಂದು ತಂಡಕ್ಕೆ 2-4 ವಿದ್ಯಾರ್ಥಿಗಳು ಮಾತ್ರ.

ಇದನ್ನೂ ಓದಿ:ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

 ವಿಜೇತ ತಂಡಕ್ಕೆ ಪ್ರಥಮ 20000=00, ದ್ವಿತೀಯ 15000=00 ಮತ್ತು ತೃತೀಯ 10000=00 ನಗದು ಬಹುಮಾನ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಮಂಜುನಾಥ ಕಮ್ಮಾರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ : www.tce.ac.in  ಲಾಗಿನ್ ಆಗಿ  ನೊಂದಣಿ ಮಾಡಬಹುದು  ಮೋಬೈಲ್ ಸಂಖ್ಯೆ:8095101442 ಸಂಪರ್ಕಿಸಬಹುದು.

ನೊಂದಣಿಗಾಗಿ  ಕ್ಲಿಕ್ ಮಾಡಿ:

ಇದನ್ನೂ ಓದಿ: ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ

Exit mobile version