ಕೊರೊನಾ ವೈರಾಣು ಸೋರಿಕೆಯ ಬಗ್ಗೆ ಬ್ರಿಟನ್ ಗುಪ್ತಚರ ಏಜನ್ಸಿ ನೀಡಿದ ವರದಿ

ಕೊರೊನಾ ವೈರಾಣು ಸೋರಿಕೆಯ ಬಗ್ಗೆ ಬ್ರಿಟನ್ ಗುಪ್ತಚರ ಏಜನ್ಸಿ ನೀಡಿದ ವರದಿ

ಕೊರೊನಾ ವೈರಾಣು ಸೋರಿಕೆಯ ಬಗ್ಗೆ ಬ್ರಿಟನ್ ಗುಪ್ತಚರ ಏಜನ್ಸಿ ನೀಡಿದ ವರದಿ

ಲಂಡನ್: ಕಳೆದ ಎರಡು ವರ್ಷದಿಂದ ಕೊರೋನಾ ಹಾವಳಿಯಿಂದ ಡೀ ಜಗತ್ತೇ ಸಂಕಷ್ಟಕ್ಕೀಡಾಗಿದೆ. ಚೀನಾದ ವುವಾನ್ ನಿಂದಲೇ ಕೊರೊನಾ ಸೋಂಕು ಆರಂಭವಾಯಿತು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಬ್ರಿಟನ್ ಸಹ ಧ್ವನಿಗೂಡಿಸಿದೆ.

ಬ್ರಿಟನ್ ನ ಗುಪ್ತಚರ ಏಜೆನ್ಸಿಗಳ ಇತ್ತೀಚಿನ ಹೇಳಿಕೆಯ ಪ್ರಕಾರ ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಚೀನಾದ ಬಯೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿದೆ.

ಬ್ರಿಟನ್ ನ ಲಸಿಕೆ ಸಚಿವ ನಧೀಮ್ ಝಹಾವಿ ಮಾರಕ ವೈರಾಣುವಿನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಸಂಪೂರ್ಣ ತನಿಖೆ ನಡೆಸಬೇಕೆಂದು ಹೇಳಿದೆ. ಕೋವಿಡ್-19 ಮೂಲ ವಿಸ್ತೃತ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದ್ದು, ಪ್ರಯೋಗಾಲಯದಿಂದಲೇ ಈ ಮಾರಕ ವೈರಾಣು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ರಾಜಕಾರಣಿಗಳು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Exit mobile version