ಹೊಸ ವರ್ಷಾಚರಣೆ: ಕೊವಿಡ್ ಮಾರ್ಗಸೂಚಿಯನ್ನು ಹೊರಡಿಸಿದ ರಾಜ್ಯ ಸರ್ಕಾರ

ಉತ್ತರಪ್ರಭ ಸುದ್ದಿ

ಬೆಳಗಾವಿ:  ದಿನದಿಂದ ದಿನಕ್ಕೆ ಕೊವಿಡ್ ಒಮಿಕ್ರಾನ್  ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆ, ಹೊಸ ವರ್ಷಾಚರಣೆಯಲ್ಲಿ ಗುಂಪು ಸೇರದಂತೆ   ರಾಜ್ಯ ಸರ್ಕಾರ ಕೊವಿಡ್ ನಿಯಮಾವಳಿಯನ್ನು ಹೊರಡಿಸಿದೆ. ಈ ನಿಯಮಾವಳಿ ದಿ.30.12.2021 ರಿಂದ 02.01.2022 ರವರೆಗೆ  ಇರಲಿದೆ ಎಂದು ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ನಿಯಮಾವಳಿಗಳು ಕ್ರಿಸ್ ಮಸ್ ಆಚರಣೆಗೆ ಅನ್ವಯವಾಗುವುದಿಲ್ಲ.

ಹೊಸ ನಿಯಮಾವಳಿಗಳು ಈ ಕೆಳಗಿನಂತೆ ಇದೆ

1. ಜನರು ಗುಂಪು  ಗುಂಪಾಗಿ ಸೇರುವಂತಿಲ್ಲ.

2.ಪಬ್ ,ಬಾರ್  ಹೊಗಲು ಮತ್ತು ಕರ್ಮಿಕರಿಗೆ 2 ಡೊಸ್ ಲಸಿಕೆ ಕಡ್ಡಾಯ.

3. ಅಪಾರ್ಟಮೆಂಟಗಳಲ್ಲಿ ಗುಂಪು ಸೇರಿ ಪಾರ್ಟಿ ಮಾಡುವಂತಿಲ್ಲ .

4.ರೆಸ್ಟೋರೆಂಟ್ ಮತ್ತು ಹೊಟೆಲ್ ಗಳಲ್ಲಿ 50-50 ಅನ್ವಯ .

5 ಚರ್ಚಗಳಲ್ಲಿ ಸಾಮಾಜಿಕ   ಅಂತರ ಕಾಪಾಡಿ ಪ್ರಾರ್ಥನೆ ಮಾಡಬೇಕು.

 ಹೀಗೆ ಅನೇಕ ನಿಯಮಾವಳಿಗಳ ಮಾರ್ಗಸೂಚಿಯನ್ನು ರಾಜ್ಯ

ಸರ್ಕಾರ  ಹೊರಡಿಸಿದೆ.

Exit mobile version