ಗದಗ: ಜಿಲ್ಲೆಯಲ್ಲಿ ಇಂದು 307 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಒಟ್ಟು 22730 ಆಗಿದೆ.
ಇದುವರೆಗೆ 372520 ಜನರು ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾಗಿದ್ದಾರೆ.
ಸೋಂಕಿನ ಪರೀಕ್ಷೆಗಾಗಿ 381761ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ 358843
ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾಗಿದ್ದು, 188 ಕೇಸ್ ಗಳ ವರದಿ ಬರಲು ಬಾಕಿ ಇದೆ. ಇಂದು ಐದು ಜನ ಸೇರಿ 236 ಜನರು ಈವರೆಗೆ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ
ಇಂದು 405 ಜನರು ಸೇರಿ
ಒಟ್ಟು 19598 ಜನ ಗುಣಮುಖರಾಗಿದ್ದಾರೆ.
ಸದ್ಯ 2896 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ.
ತಾಲೂಕುವಾರು ಸೋಂಕಿತರ ವಿವರ ಗದಗ-133, ಮುಂಡರಗಿ-40, ನರಗುಂದ-22, ರೋಣ-52, ಶಿರಹಟ್ಟಿ-49, ಹೊರಜಿಲ್ಲೆಯ ಪ್ರಕರಣಗಳು-06
ಕೋವಿಡ್-19: ಮೃತರ ವಿವರ
ಗದಗ ತಾಲ್ಲೂಕಿನ ಬೆಟಗೇರಿ ನಿವಾಸಿ 40 ವರ್ಷದ ಮಹಿಳೆ ಪಿ-2564500 ಅವರು ಜಿಮ್ಸ್ ಆಸ್ಪತ್ರೆಗೆ ಮೇ.14 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ, ನಿಮೋನಿಯಾ ಕಾಯಿಲೆಯಿಂದ ಮೇ.23 ರಂದು ಮೃತಪಟ್ಟಿರುತ್ತಾರೆ.
ಧಾರವಾಡ ಜಿಲ್ಲೆ ಹುಬ್ಬಳ್ಳಿ ನಿವಾಸಿ 48 ವರ್ಷದ ಮಹಿಳೆ ಪಿ-2564503 ಅವರು ಜಿಮ್ಸ್ ಆಸ್ಪತ್ರೆಯಲ್ಲಿ ಮೇ.11 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ, ನಿಮೋನಿಯ ತೊಂದರೆಯಿಂದಾಗಿ ಮೇ.23 ರಂದು ಮೃತಪಟ್ಟಿರುತ್ತಾರೆ.
ಶಿರಹಟ್ಟಿ ತಾಲ್ಲೂಕು ನಿವಾಸಿ 35 ವರ್ಷದ ಪುರುಷ ಪಿ-2564504 ಅವರು ಜಿಮ್ಸ್ ಆಸ್ಪತ್ರೆಗೆ ಮೇ.20 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಶಕೋಶ, ನಿಮೋನಿಯಾ ತೊಂದರೆಯಿಂದಾಗಿ ಮೇ.23 ರಂದು ಮೃತಪಟ್ಟಿರುತ್ತಾರೆ.
ರೋಣ ತಾಲ್ಲೂಕಿನ ಹುಲ್ಲೂರ ನಿವಾಸಿ 72 ವರ್ಷದ ಪುರುಷ ಪಿ-2443201 ಅವರು ಜಿಮ್ಸ್ ಆಸ್ಪತ್ರೆಗೆ ಮೇ.20 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ, ನಿಮೋನಿಯಾ ತೊಂದರೆಯಿಂದಾಗಿ ಮೇ.26 ರಂದು ಮೃತಪಟ್ಟಿರುತ್ತಾರೆ.
ಗದಗ ತಾಲ್ಲೂಕಿನ ಕಳಸಾಪುರ ನಿವಾಸಿ 37 ವರ್ಷದ ಪುರುಷ ಪಿ-2564506 ಅವರು ಖಾಸಗಿ ಆಸ್ಪತ್ರೆಗೆ ಮೇ.21 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ನಿಮೋನಿಯಾ ತೊಂದರೆಯಿಂದಾಗಿ ಮೇ.24 ರಂದು ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿರುತ್ತಾರೆ.
