ಗದಗ: ಜಿಲ್ಲೆಯಲ್ಲಿ ಶನಿವಾರ 307 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 23037 ಏರಿಕೆಯಾಗಿದೆ. ಇನ್ನು ಶನಿವಾರ ಕೊರೊನಾ ಸೋಂಕಿನಿಂದ ಐವರು ಸಾವನ್ನಪ್ಪಿದ್ದು ಈ ಮೂಲಕ ವರೆಗೆ 241 ಜನ ಜಿಲ್ಲೆಯಲ್ಲಿ ಸಾವನ್ನಪ್ಪಿದಂತಾಗಿದೆ.
ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 374444 ಆಗಿದ್ದು, ಒಟ್ಟು 383796 ಸೋಂಕಿನ ಮಾದರಿ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದರಲ್ಲಿ 360564 ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾಗಿದೆ. ಇನ್ನು 195
ಪ್ರಕರಣಗಳ ವರದಿ ಬರಲು ಬಾಕಿ ಇದೆ. ಶನಿವಾರ 400 ಜನ ಸೇರಿ ಒಟ್ಟು 19998 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 2798 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುವಾರು ಒಟ್ಟು ಸೋಂಕಿತರ ವಿವರ : ಗದಗ-126, ಮುಂಡರಗಿ-47, ನರಗುಂದ-26, ರೋಣ-50, ಶಿರಹಟ್ಟಿ-48, ಹೊರಜಿಲ್ಲೆಯ ಪ್ರಕರಣಗಳು-10 ಕೇಸ್ ಗಳಿವೆ ಎಂದು ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಮೃತರ ವಿವರ
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಇಬ್ರಾಹಿಂಪೂರ ನಿವಾಸಿ 43 ವರ್ಷದ ಪುರುಷ ಪಿ-2568764 ಅವರು ಜಿಮ್ಸ್ ಆಸ್ಪತ್ರೆಗೆ ಮೇ.26 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ, ನಿಮೋನಿಯಾ ಕಾಯಿಲೆಯಿಂದ ಮೇ.27 ರಂದು ಮೃತಪಟ್ಟಿರುತ್ತಾರೆ.
ಗದಗ ತಾಲ್ಲೂಕಿನ ಹನುಮಾನ ನಗರ ನಿವಾಸಿ 31 ವರ್ಷದ ಪುರುಷ ಪಿ-2565714 ಅವರು ಖಾಸಗಿ ಆಸ್ಪತ್ರೆಯಲ್ಲಿ ಮೇ.22 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ನಿಮೋನಿಯ ತೊಂದರೆಯಿಂದಾಗಿ ಮೇ.24 ರಂದು ಮೃತಪಟ್ಟಿರುತ್ತಾರೆ.
ಗದಗ ತಾಜ್ ನಗರ ನಿವಾಸಿ 76 ವರ್ಷದ ಪುರುಷ ಪಿ-2556184 ಅವರು ಖಾಸಗಿ ಆಸ್ಪತ್ರೆಗೆ ಮೇ.25 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ನಿಮೋನಿಯಾ ತೊಂದರೆಯಿಂದಾಗಿ ಮೇ.26 ರಂದು ಮೃತಪಟ್ಟಿರುತ್ತಾರೆ.
ಗದಗ ತಾಲ್ಲೂಕಿನ ಹೊಸೂರ ನಿವಾಸಿ 70 ವರ್ಷದ ಮಹಿಳೆ ಪಿ-2443196 ಅವರು ಜಿಮ್ಸ್ ಆಸ್ಪತ್ರೆಗೆ ಮೇ.19 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ, ನಿಮೋನಿಯಾ ತೊಂದರೆಯಿಂದಾಗಿ ಮೇ.21 ರಂದು ಮೃತಪಟ್ಟಿರುತ್ತಾರೆ.
ರೋಣ ತಾಲ್ಲೂಕಿನ ಹೊನ್ನಾಪುರ ನಿವಾಸಿ 39 ವರ್ಷದ ಮಹಿಳೆ ಪಿ-2564505 ಅವರು ಜಿಮ್ಸ್ ಆಸ್ಪತ್ರೆಗೆ ಮೇ.11 ರಂದು ದಾಖಲಾಗಿದ್ದರು. ಇವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶ ನಿಮೋನಿಯಾ ತೊಂದರೆಯಿಂದಾಗಿ ಮೇ.24 ರಂದು ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿರುತ್ತಾರೆ.
