ಕಾಲೇಜ್ ಟೀಚರ್ತಿಯ ಸೇವಾ ಕಾರ್ಯ

ಕಾಲೇಜ್ ಟೀಚರ್ತಿಯ ಸೇವಾ ಕಾರ್ಯ

ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಪ್ರೊ.ತಾರಾ

ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಪ್ರೊ.ತಾರಾ

ಗದಗ: ಕೊರೊನಾದ ಈ ಸಂಕಷ್ಟದಲ್ಲಿ ಅದೆಷ್ಟೋ ಜನರು ಬಡ ಜನರ ಸಹಾಯಕ್ಕೆ ಮುಂದಾಗಿದ್ದಾರೆ. ಕೆಲವರು ಪ್ರಾಮಾಣಿಕ ಸಹಾಯ ಮಾಡಿದರೆ ಇನ್ನು ಕೆಲವರ ಸಹಾಯದ ಉದ್ದೇಶವೇ ಬೇರೆಯದ್ದಾಗಿರುತ್ತದೆ. ಆದರೆ ಕಾಲೇಜು ಉಪನ್ಯಾಸಕಿಯೊಬ್ಬರು ಹಳ್ಳಿಯೊಂದರ ನೂರಾರು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ದುಡಿಯುವ ಕೈಗಳು ಕೆಲಸವಿಲ್ಲದೇ ಮನೆಯಲ್ಲಿ ಉಳಿದಿದುಕೊಂಡಿದ್ದಾರೆ. ಇದರಿಂದಾಗಿ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿರುವ 100 ಬಡ ಕುಟುಂಬಗಳಿಗೆ ಪ್ರಾಧ್ಯಾಪಕಿ ತಾರಾ ಅವರು ತಮ್ಮ ಸ್ವಂತ ಹಣದಿಂದ ಆಹಾರ ಕಿಟ್‌ ವಿತರಿಸಿ ಮಾನವೀಯತೆ ಮೆರೆದಿದರು.

ಮಲ್ಲಸಮುದ್ರ ಗ್ರಾಮದಲ್ಲಿರುವ ಬಡ ಕುಟುಂಬಗಳ ಮನೆ ಮನೆಗೆ ತೆರಳಿ ಸಕ್ಕರೆ, ಟೀ ಫೌಡರ್‌, ಎಣ್ಣೆ ಪಾಕೇಟ್‌, ರವಾ, ಅವಲಕ್ಕಿ, ಗೋಧಿ ಹಿಟ್ಟು ಸೇರಿದಂತೆ ಇತರೇ ದಿನಸಿಗಳ ಕಿಟ್‌ ಸಿದ್ಧಪಡಿಸಿ ವಿತರಿಸಿದರು. ಪ್ರಾದ್ಯಾಪಕಿಯ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಯಿತು.

Exit mobile version