ಇನ್ನು ಮುಂದೆ ವಾಟ್ಸಪ್ ಮೂಲಕವೂ ಹಣ ವರ್ಗಾಯಿಸಬಹುದು!

ನವದೆಹಲಿ : ದೇಶದಲ್ಲಿನ ವಾಟ್ಸಪ್ ಬಳಕೆದಾರರಿಗೆ ಆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ವಾಟ್ಸಪ್ ಬಳಕೆದಾರರು ಇದರ ಮೂಲಕ ಹಣ ವರ್ಗಾಯಿಸಬಹುದಾಗಿದೆ. ಇದಕ್ಕೆ ಈಗಾಗಲೇ ರಾಷ್ಟ್ರೀಯ ಪಾವತಿ ನಿಗಮ(ಎನ್ ಪಿಸಿಐ) ಅನುಮೋದನೆ ನೀಡಿದೆ.

ಕಳೆದ 3 ವರ್ಷಗಳ ಹಿಂದೆಯೇ ವಾಟ್ಸಪ್ ರಾಷ್ಟ್ರೀಯ ಪಾವತಿ ನಿಗಮಕ್ಕೆ ಈ ಕುರಿತು ಮನವಿ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಕಾಯುತ್ತಿತ್ತು. ಈಗ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ವಾಟ್ಸಪ್ ಯುಪಿಐ ಆಧಾರಿತ ಪಾವತಿ ಪರೀಕ್ಷೆ ಮಾಡಿದೆ.

ದೇಶದಲ್ಲಿ ಈಗಾಗಲೇ ವಾಟ್ಸಪ್ ಪೇಮೆಂಟ್ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ. ವಾಟ್ಸಪ್ ನಲ್ಲಿ ಪೇಮೆಂಟ್ ಆಯ್ಕೆಯಿದ್ದವರು ಇದನ್ನು ಬಳಕೆ ಮಾಡಿಕೊಳ್ಳಲು ಪ್ರಾರಂಭಿಸಬಹುದು. ಆಯ್ಕೆ ಇಲ್ಲದಿದ್ದರೆ, ವಾಟ್ಸಾಪ್ ನ್ನು ಅಪ್ಡೇಟ್ ಮಾಡಿ ಪೇಮೆಂಟ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬಹುದು. 

ಇದನ್ನು ಬಳಕೆ ಮಾಡಿಕೊಳ್ಳಬೇಕಾದರೆ ಗ್ರಾಹಕರ ಬಳಿ ಡೆಬಿಟ್ ಕಾರ್ಡ್ ಇರಬೇಕು. ವಾಟ್ಸಾಪ್ ಪೇಮೆಂಟ್ ಗೆ ಹೋಗಿ ಬ್ಯಾಂಕ್ ವಿವರಗಳನ್ನು ನಮೂದಿಸಬೇಕು. ಆ ನಂತರವೇ ಇದು ಸಕ್ರೀಯವಾಗಲಿದೆ. ಈಗಾಗಲೇ ವಾಟ್ಸಪ್ ಕೆಲವು ಬ್ಯಾಂಕ್ ಗಳೊಂದಿಗೆ ಒಪ್ಪಂದ  ಮಾಡಿಕೊಂಡಿದೆ. ಐಸಿಐಸಿಐ ಬ್ಯಾಂಕ್, ಜಿಯೋ ಪೇಮೆಂಟ್ಸ್, ಎಸ್ ಬಿಐ, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

Exit mobile version