ವಾಟ್ಸಾಪ್ ಬಳಕೆದಾರರಿಗೆ ಇನ್ಮೂಂದೆ ಹೆಚ್ಚಿನ ಬದ್ರತೆ

ದೆಹಲಿ : ವಾಟ್ಸ್ ಆಪ್ ವೆಬ್ ಮತ್ತು ಡೆಸ್ಕ್ ಟಾಪ್ ಹೊಸ ಮತ್ತು ಉತ್ತಮ ಭದ್ರತಾ ವೈಶಿಷ್ಟö್ಯಗಳೊಂದಿಗೆ ಅಪ್ ಡೇಟ್ ಆಗಲಿದೆ. ಹೊಸ ಅಪ್ ಡೇಟ್ ಪ್ರಕಾರ, ಬಳಕೆದಾರರು ಲಾಗಿನ್ ಆಗುವ ಮುನ್ನ ಡೆಸ್ಕ್ ಟಾಪ್ ಆಪ್‌ನಲ್ಲಿ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿಯನ್ನು ದೃಢೀಕರಿಸಬೇಕಾಗುತ್ತದೆ. ಹೊಸದಾಗಿ ಪರಿಚಯಿಸಲಾದ ಈ ವೈಶಿಷ್ಟö್ಯವು ಖಾತೆಗೆ ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.


ನಿಮ್ಮ ಅರಿವಿಲ್ಲದೇ ನಿಮ್ಮ ಖಾತೆಗೆ ಇತರರು ಲಾಗಿನ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸದ್ಯ ವಾಟ್ಸ್ ಆಪ್ ವೆಬ್/ ಡೆಸ್ಕ್ ಟಾಪ್ ಆವೃತ್ತಿಯಲ್ಲಿ ಯಾವುದೇ ಸುರಕ್ಷತೆಯಿಲ್ಲ್ಲ. ಬಳಕೆದಾರರು ಕೇವಲ ಕೋಡ್ ಸ್ಕಾö್ಯನ್ ಮಾಡುವ ಮೂಲಕ ಖಾತೆಗೆ ಲಾಗಿನ್ ಆಗಬಹುದು.


ಬಯೋಮೆಟ್ರಿಕ್ ಲಾಗಿನ್‌ಗಳು ಬಳಕೆದಾರರಿಗೆ ಅಂತರ್ಜಾಲದಿAದ ವಂಚನೆ ಮತ್ತು ಅಜ್ಞಾತ ಲಾಗಿನ್‌ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ತನ್ನ ಸರ್ವರ್‌ಗಳು ಯಾವುದೇ ಬಯೋಮೆಟ್ರಿಕ್ಸ್ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ವಾಟ್ಸ್ ಆಪ್ ಹೇಳಿದೆ. ಈ ಪ್ರಕ್ರಿಯೆಯು ಕ್ಲೌಡ್ ಆಧಾರಿತವಾಗಿರುತ್ತದೆ ಮತ್ತು ಡಿವೈಸ್‌ನಲ್ಲಿಯೇ ಸಂಪೂರ್ಣವಾಗಿ ನಡೆಯುತ್ತದೆ.


ಈ ಫೀಚರ್ ಅನ್ನು ವಾಟ್ಸಾಪ್ ಇನ್ನೂ ಬಹಿರಂಗಮಾಡಿಲ್ಲ. ಮುಂಬರುವ ವಾರಗಳಲ್ಲಿ ವಾಟ್ಸ್ ಆಪ್ ಈ ಭದ್ರತಾ ಅಪ್‌ಡೇಟ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಲಿದೆ.

Exit mobile version