ಗೂಗಲ್ ನಿಂದ ನೀವು ಹಣ ಸಂಪಾದನೆ ಮಾಡಬಹುದು

ದೆಹಲಿ: ಗೂಗಲ್​ ಕಂಪನಿ ಟಾಸ್ಕ್​ ಮೇಟ್​ ಎಂಬ ಅಪ್ಲಿಕೇಶನ್​ ಒಂದರ ಟೆಸ್ಟಿಂಗ್​ ನಡೆಸುತ್ತಿದೆ. ಇದರ ಸಹಾಯದಿಂದ ಬಳಕೆದಾರರು ಹಣ ಸಂಪಾದನೆ ಮಾಡಬಹುದಾಗಿದೆ.

ಸದ್ಯ ಬೀಟಾ ಟೆಸ್ಟಿಂಗ್​ ಫೇಸ್​ನಲ್ಲಿರುವ ಈ ಅಪ್ಲಿಕೇಶನ್​ ಬಳಕೆದಾರರಿಗೆ ಫೋಟೋ, ಸ್ಥಳ ಗುರುತಿಸುವ ಇಲ್ಲವೇ ಅನುವಾದ ಮಾಡುವ ಟಾಸ್ಕ್​ಗಳನ್ನ ನೀಡುತ್ತೆ. ಇದರಲ್ಲಿ ಉತ್ತೀರ್ಣರಾದವರಿಗೆ ಹಣ ನೀಡುವ ಕೆಲಸ ಮಾಡುತ್ತಿದೆ.

ಟಾಸ್ಕ್ ಮೇಟ್ ಅಪ್ಲಿಕೇಶನ್​ ಸದ್ಯ ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿದೆ. ಈ ಅಪ್ಲಿಕೇಶನ್​​ನಲ್ಲಿ ಬಳಕೆದಾರರಿಗೆ ಕೆಲ ಟಾಸ್ಕ್​​ಗಳನ್ನ ನೀಡಲಾಗುತ್ತದೆ. ಈ ಟಾಸ್ಕ್​ ಪೂರ್ತಿ ಮಾಡಿದ ಬಳಕೆದಾರರಿಗೆ ಗೂಗಲ್​ ಹಣ ನೀಡಲಿದೆ.

Exit mobile version