ಲಕ್ಷ್ಮೇಶ್ವರದಲ್ಲಿ ಕರ್ಫ್ಯೂ ಭಾಗಶಃ ಯಶಸ್ವಿ; ದಂಡಾಧಿಕಾರಿಗಳಿಂದ ರೂಲ್ಸ್ ಬ್ರೇಕ ಮಾಡಿದವರಿಗೆ ದಂಡ.

ಲಕ್ಷ್ಮೇಶ್ವರ: ಬಿಕೋ ಎನ್ನುತ್ತಿರುವ ಪ್ರಮುಖ ಹೆದ್ದಾರಿ, ಬಸ್ ನಿಲ್ದಾಣಗಳು… ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ನೈಟ್ – ವೀಕೆಂಡ್ ಕರ್ಫ್ಯೂ ಗೆ ಸಿದ್ಧತೆ ನಡೆಸಿ ಶನಿವಾರ ಮತ್ತು ರವಿವಾರದಂದು ಬಿಗಿ ಬಂದೋ ಬಸ್ತ ಮಾಡಲಾಗಿದೆ. ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಪುರಸಭೆಯವರು ಸೇರಿ ಬೇಕಾ ಬಿಟ್ಟಿ ಓಡಾಡುವರಿಗೆ, ಸಂಚಾರಿಗಳ ವಾಹನ ಸೀಜ್ ಮಾಡಲಾಯಿತು, ಹಾಗೂ ದಂಡ ಹಾಕಲಾಯಿತು. ಪೊಲೀಸರು ಸುಮಾರು ವಾಹನ ಸೀಜ್ ಮಾಡಿದ್ದಾರೆ.

ಬಸ್ ನಿಲ್ದಾಣ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿತ್ತು. ಇದರಿಂದ ವೀಕೆಂಡ್ ಕರ್ಫ್ಯೂ ಶೇ.90 ರಷ್ಟು ಯಶಸ್ಸು ಕಂಡಿದೆ ಅಂತಾರೆ ಜನ.
ತಾಲೂಕಿನ ಪಾಳಾ, ಬಾದಾಮಿ‌ ರಾಜ್ಯ ಹೆದ್ದಾರಿಯಲ್ಲಿ ಚಕ್ ಪೋಸ್ಟ ಲಕ್ಷ್ಮೇಶ್ವರ – ಹುಬ್ಬಳ್ಳಿ ಹೆದ್ದಾರಿ ಚಕ್ ಪೋಸ್ಟಗಳಲ್ಲಿ ಮಾಸ್ಕ ಹಾಕದವರಿಗೆ ಹಾಗೂ ಬೇಕಾಬಿಟ್ಟಿ ಓಡಾಡುವ ವಾಹನ ಸವಾರರಿಗೆ ದಂಡ ಹಾಕುತ್ತಿರುವುದು ಕಂಡು ಬರುತ್ತಿತ್ತು.

ಅದೇ ಸ್ಥಿತಿ. ಲಕ್ಷ್ಮೇಶ್ವರ – ಗದಗ ರಾ.ಹೆ.ಯಲ್ಲೂ ಶೇ. 10ರಿಂದ 15ರಷ್ಟು ‌ಎಮರ್ಜೆನ್ಸಿ ವಾಹನ ಸಂಚಾರವಿತ್ತು. ಹುಬ್ಬಳ್ಳಿ ರಸ್ತೆಯಲ್ಲಿ ರಸ್ತೆಯಲ್ಲಿ ಶೇ. 20ರಷ್ಟು ವಾಹನ ಸಂಚಾರವಿತ್ತು. ಆಟೋ ಸಹಿತ ಎಮರ್ಜೆನ್ಸಿ ಸೇವೆ ಮುಂದುವರಿದಿತ್ತು. ಪ್ರಯಾಣಿಕರಿಲ್ಲದೆ ಬಸ್ & ಆಟೋ ಖಾಲಿ ಖಾಲಿಯಾಗಿದ್ದವು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿಕೆಂಡ್ ಕರ್ಫೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದೆವೆ . ಜನರು ನಮಗೆ ಸಹಕಾರ ಕೊಡಬೇಕು ನಾನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಚರಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದೆನೆ . ಜನರಿಗಾಗಿ ನಮ್ಮ ಜೀವಕ್ಕಾಗಿ ನಾವು ಸರಕಾರದ ಆದೇಶದಂತೆ ಕೋರೋನಾ ಮಾರ್ಗಸೂಚಿ ಪಾಲಿಸಬೇಕು- ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ

ಸರ್ಕಾರದ ಆದೇಶದಂತೆ ಗದಗ ಜಿಲ್ಲಾ ಅಧಿಕಾರಿಗಳ ಆದೇಶದಂತೆ, ನಮ್ಮ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೋರೋನಾ ತಡೆಗಟ್ಟುವದಕ್ಕಾಗಿ ಬಿಗಿ ಬಂದೋಬಸ್ತ ಮಾಡಲಾಗಿದೆ, ಜನರ ಸಹಕಾರವು ನಮಗೆ ಬೇಕಾಗಿದೆ. ಪೋಲಿಸ್ ಇಲಾಖೆಯು ತುಂಬಾ ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ಇಗಾಗಲೇ ಲಕ್ಷ್ಮೇಶ್ವರ ಪಟ್ಟಣದ ಎಲ್ಲಾ ವ್ಯಾಪಾರಸ್ಥರಿಗೆ, ಕೋರೋನಾ ಜಾಗೃತಿ ಮೂಡಿಸಲು ಮುಂದಾಗಿದ್ದೆವೆ, ಅನಗತ್ಯವಾಗಿ ಓಡಾಡುವರಿಗೆ ದಂಡ ವಿಧಿಸಲಾಗುತ್ತಿದೆ-ವಿಕಾಶ ಲಮಾಣಿ, ಸಿಪಿಐ ಶಿರಹಟ್ಟಿ ವೃತ್ತ,

ಸಂದರ್ಭದಲ್ಲಿ ಕಂದಾಯ ನೀರಿಕ್ಷಕ ಬಸವರಾಜ ಕಾತ್ರಾಳ, ಪುರಸಭೆ ಆರೋಗ್ಯ ನೀರಕ್ಷಕ ಮಂಜುನಾಥ ಮುದಗಲ್, ಕಂದಾಯ ಇಲಾಖೆಯ ಶಿರೆಸ್ಥದಾರರಾದ ಆರ್ ಎಮ್ ಹರಿಜನ ಗ್ರಾ,ಲೆ,ಸುಷ್ಮಾ ವಡಕಪ್ಪನವರ ಪುರಸಭೆ ಪೌರಕಾರ್ಮಿಕರ ಮುಖಂಡ ಬಸವರಾಜ ನಂದಣ್ಣವರ, ದೇವಪ್ಪ ನಂದಣ್ಣವರ , ಸಿದ್ದಣ್ಣ ಬಾಲೆಹೊಸೂರ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.

Exit mobile version