ಲಕ್ಷ್ಮೇಶ್ವರ: ಬಿಜೆಪಿ ರಾಜಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಬಹಿರಂಗವಾಗಿ ಹೇಳಿರುವ ಸದಾಶಿವ ಆಯೋಗದ ಬಗೆಗಿನ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಂಜಾರ ಸಮಾಜದ ಕ್ಷಮೆಯಾಚಿಸಬೇಕೆಂದು ಲಕ್ಷ್ಮೇಶ್ವರ ಘಟಕದ ಬಂಜಾರ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಂಜಾರ ಯುವ ಸೇನೆ ಅಧ್ಯಕ್ಷ ಅರ್ಜುನ ಕಾರಬಾರಿ ಮಾತನಾಡಿ ಪರಿಶಿಷ್ಟ ವರ್ಗದ ಕೊರಮ, ಕೊರಚ, ಭೋವಿ, ಸುಡಗಾಡ ಸಿದ್ದರು, ಮತ್ತು ಇತರರನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಪರೋಕ್ಷ ಹೇಳಿಕೆ ನೀಡಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಶಿರಾ ಉಪಚುನಾವಣೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಬಂಜಾರ ಹಾಗೂ ಇತರೆ ಪರಿಶಿಷ್ಟ ಜಾತಿಯ ಜನಾಂಗದವರು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಟೀಲ್ ವಿರುದ್ಧ ಕಿಡಿಕಾರಿದ್ರು.
ಮಹೇಶ ಅಕ್ಕಿಗುಂದ ಮಾತನಾಡಿ ನಳಿನಕುಮಾರ ಈ ಹೇಳಿಕೆ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ನ್ಯಾ.ಸದಾಶಿವ ವರದಿಯ ಬಗ್ಗೆ ಸರಕಾರದಲ್ಲಿ ವಾದವಿವಾದಗಳು ನಡೆಯುತ್ತಿವೆ. ಈ ಬಗ್ಗೆ ಬಹಿರಂಗ ಚರ್ಚೆಯಲ್ಲಿ ಆಗಿಲ್ಲ. ಆದರೆ ಕಟೀಲ್ ಅವರು ಸದಾಶಿವ ವರದಿಯ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲದೇ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರಮೇಶ ಲಮಾಣಿ, ರಮೇಶ ಲಮಾಣಿ, ನಾಗೇಶ ಲಮಾಣಿ, ಗಣೇಶ ನಾಯಕ, ಸೋಮು ಲಮಾಣಿ, ಕಿರಣ ಲಮಾಣಿ, ಟಿ.ಸಿ.ಪೂಜಾರ ಕೃಷ್ಣ ಲಮಾಣಿ, ಅಶೋಕ ಲಮಾಣಿ, ವಿಠ್ಠಲ ನಾಯಕ, ಶಂಕರ ಕಾರಬಾರಿ, ಮಾಂತೇಶ ಲಮಾಣಿ, ನಾನಪ್ಪ ಲಮಾಣಿ, ಗಣೇಶ ಲಮಾಣಿ, ಶಿವಪ್ಪ ಲಮಾಣಿ, ಗೋಪಿ ಲಮಾಣಿ ಸೇರಿದಂತೆ ಅನೇಕರು ಇದ್ದರು.
