ಬಂಜಾರ ಭಾಷೆ, ಸಂಸ್ಕೃತಿ ಉಳುವಿಗಾಗಿ ಸಮನ್ವಯ ಮಹಾಸಭೆ

ಉತ್ತರಪ್ರಭ ಸುದ್ದಿ


ವಿಜಯಪುರ:
ಜಿಲ್ಲೆಯ ಕೋಲ್ಹಾರ ತಾಲೂಕಿನ ಕೂಡಗಿ ತಾಂಡಾದ ಸದಾ ಸಮಾಜದ ಬಗ್ಗೆ ಚಿಂತಿಸುವ ಶ್ರೀ ಶಂಕರಲಿಂಗ ಗುರುಪೀಠ ಸಂಸ್ಥಾನ ಮಠ ಕೆಸರಟ್ಟಿ ಶಾಖಾಮಠ ಕೂಡಗಿ ಮತ್ತು ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸಿಖವಾಡಿ ಮತ್ತು ಗೋರ ಸೇನಾ ಇವರುಗಳ ಸಹಯೋಗದಲ್ಲಿ ಶ್ರೀ ಶಂಕರಲಿಂಗೇಶ್ವರ ಇಂಗ್ಲಿಷ್ ಮೀಡಿಯಮ ಸ್ಕೂಲ್ ಕೂಡಗಿ ತಾಂಡಾದಲ್ಲಿ ಸಮನ್ವಯ ಮಹಾಸಭೆ ಏರ್ಪಡಿಸಲಾಗಿತ್ತು.


ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸೀಖವಾಡಿ, ಬಂಜಾರ ಧರ್ಮದ ಚಿಂತನ ಮಂಥನ ಶಿಬಿರವನ್ನು ಸಿದ್ದಲಿಂಗ ಮಹಾಸ್ವಾಮಿ ವಿಜಯ ಮಹಾಂತೇಶ್ವರ ಸ್ವಾಮೀಜಿ ಸಂಸ್ಥಾನ ಮಠ ಉದ್ಘಾಟಿಸಿದರು.
ಬಂಜಾರ ಜನಾಂಗದ ಸಂಸ್ಕೃತಿ ಉಳಿವಿಗಾಗಿ ಸಂತ ಶಕ್ತಿ ಮತ್ತು ಸಂಘ ಶಕ್ತಿ ಜೋತೆಗೂಡಿ ಕೆಲಸಮಾಡಿ, ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಲು ಸಭೆಯಲ್ಲಿ ಸಲಹೆ ನೀಡಲಾಯಿತು.
ಬಂಜಾರ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಪಣ ತೊಡಬೇಕು. ಲಂಬಾಣಿಗರ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವಸಲುವಾಗಿ ಸರಕಾರ ಹಾಗೂ ನಮ್ಮ ಸಂಘಟನೆ ಮೈಗೂಡಿಸಿಕೊಳ್ಳಬೇಕು ಎಂದು ಬಂಜಾರ ಧರ್ಮ ಗುರುಗಳ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾರಾಜ ಇಲಕಲ್ ವಿಜಯಮಹಾಂತೇಶ ಚಿತ್ತರಗಿ ಶಾಖಾಮಠ, ಲಿಂಗಸೂರು ಸ್ವಾಮೀಜಿ ಹೇಳಿದರು.

ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸಿಖವಾಡಿ ಮತ್ತು ಗೋರ ಸೇನಾ ಇವರುಗಳ ಚಿಂತನ ಮಂಥನ


ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸಿಖವಾಡಿ ಮತ್ತು ಗೋರ ಸೇನಾ ಆಶ್ರಯದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಬಂಜಾರ ಯುವ ಚಿಂತನ ಶಿಬಿರವನ್ನು ಅವರು ಉದ್ಘಾಟಿಸಿ.
ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸೀಖವಾಡಿ ಜಂಟಿ ಚಿಂತನ ಮಂಥನ ಸಭೆಯಲ್ಲಿ ಮತಾಂತರ, ಶಿಕ್ಷಣ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಗೋರ ಸೀಖವಾಡಿ ಮತಾಂತರ ಕಾಯ್ದೆಗೆ ಕೆಲವರ ಕೈ ಮಿಲಾಯಿಸುವದರಿಂದ ಉಂಟಾಗುತ್ತಿರುವ ಬಂಜಾರ ಸಮುದಾಯದ ಸಂಸ್ಕ್ರತಿ, ಭಾಷೆಯನ್ನು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಮುಕ್ತವಾಗಿ ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಲಾಯಿತು.


ಬಂಜಾರ್ ಸಮುದಾಯವು ತನ್ನದೇ ಅದಾ ವೇಷ ಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟೀಷರು ಇವರನ್ನು ‘ಜಿಪ್ಸಿ’ಗಳೆಂದು ಕರೆಯುತ್ತಿದ್ದರು. ಭಾರತೀಯ ಸಂವಿಧಾನವು ಇವರನ್ನು ಅಧಿಸೂಚಿತ ‘ಬುಡಕಟ್ಟು ಜನಾಂಗ’ವೆAದು ಪರಿಗಣಿಸಿಲಾಗಿದೆ.
ರಾಜ್ಯದ ತಾಂಡಾಗಳಲ್ಲಿ ಬಡತನ, ಅನಕ್ಷರತೆಯು ತಾಂಡವವಾಡುತ್ತಿವೆ. ಈ ಬಗ್ಗೆ ಚರ್ಚಿಸಲು ರಾಜ್ಯದಾದ್ಯಂತ ಇಂತಹ ಶಿಬಿರಗಳನ್ನು ನಡೆಸಬೇಕು. ಶಿಬಿರದಲ್ಲಿ ನಡೆಯುವ ಚಿಂತನೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಸಲಹೆ ನೀಡಲಾಗಿದೆ.ಸಮನ್ವಯ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಮನ್ವಯ ಸಮಿತಿಯ ನಿರ್ಣಯದಂತೆ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಲಾಯಿತು.


ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸೀಖವಾಡಿ ಜಂಟಿ ಸಮಾವೇಶ ವೇಳೆ ಸಂಬAಧಿತ ಮತಾಂತರ, ಶಿಕ್ಷಣ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಬಂಜಾರ ಸಮುದಾಯದ ಸಂಸ್ಕ್ರತಿ, ಭಾಷೆಯನ್ನು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಬಂಜಾರದ ಕೇಸರಟ್ಟಿ ಶಾಖಾ ಮಠದಲ್ಲಿ ಮುಕ್ತವಾಗಿ ಪ್ರಶ್ನೆಗಳಿಗೆ ಶ್ರೀ ಸಿದ್ಧಲಿಂಗ ಮಹಾರಾಜ ಇಲಕಲ್, ಶಿರೂರಿನ ಶ್ರೀ ಕುಮಾರ ಮಹಾರಾಜ, ಸೋಮಲಿಂಗ ಮಹಾರಾಜ, ಗೋವಿಂದ ಮಹಾರಾಜ, ಮುರಾರಿ ಮಹಾರಾಜ, ಭಾಗ್ಯವತಿ ಮಾತಾ,ಜಗನು ಮಹಾರಾಜ, ಸಂಜು ಮಹಾರಾಜ, ಗೋಪಾಲ ಮಹಾರಾಜ ಸೇರಿದಂತೆ ಅನೇಕ ಧರ್ಮ ಗುರುಗಳು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ಅದರಂತೆ ಗೋರ ಸಿಖವಾಡಿ ಮತ್ತು ಗೋರ ಸೇನಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅರುಣ ದಿಗಂಬರ್ ಚವ್ಹಾಣ, ಗೋರಸೇನಾ ರಾಜ್ಯಾಧಕ್ಷ ಶ್ರೀ ರವಿಕಾಂತ ಅಂಗಡಿ ಪ್ರಶ್ನೆಗಳಿಗೆ ಉತ್ತರಿಸಿದರು. ನಿರೂಪಣೆಯನ್ನು ಡಾ. ರಾಜೇಂದ್ರ ಬಾಬು ನಡೆಸಿ ಕೊಟ್ಟರು.

ಬಂಜಾರ ಸಮುದಾಯವು ತನ್ನದೇ ಅದ ವೇಷ ಭೂಷಣದಿಂದ ಭಾರತೀಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಈ ಕಾರ್ಯಕ್ರಮ ಐತಿಹಾಸಿಕವಾಗಿತ್ತು ಎಂದು ಘೋಷಣೆ ಕೂಗಿದರು.


ಇದೇ ವೇಳೆ ಮಾತನಾಡಿದ ಗೋರ ಸೇನಾ ರಾಷ್ಟ್ರೀಯ ಅಧ್ಯಕ್ಷ ಅರುಣದಿಗಂಬರ ಚವ್ಹಾಣ, ಅತ್ಯಂತ ಸ್ವಾಭಿಮಾನಿ, ಪ್ರಾಮಾಣಿಕ ಶ್ರೀಕೃಷ್ಣನ ಕಾಲದಿಂದಲೂ ದೇವರಿಗೆ ಅತ್ಯಂತ ಹತ್ತಿರವಾದ ಕುಚೇಲನ ಶಿಷ್ಯರು ಎನಿಸಿಕೊಂಡ ಸಮಾಜ ನಮ್ಮದು. ದುಶ್ಚಟಗಳಿಗೆ ಬಲಿಯಾಗಿ ಕುಟುಂಬ ಜೀವನ ಹಾನಿಮಾಡಿಕೊಂಡು, ಆರ್ಥಿಕ ಹಿನ್ನಡೆಯ ಪರಿಸ್ಥಿತಿ ಬಂದಿದೆ. ಬಂಜಾರ ಧರ್ಮ ಗುರುಗಳ ಮಹಾಸಭಾ ಹಾಗೂ ಗೋರ ಸಿಖವಾಡಿ ಮತ್ತು ಗೋರಸೇನಾ ಇವರುಗಳ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ನಾವು ದೇಶ, ವಿದೇಶಗಳಲ್ಲಿ ಹೆಸರು ಮಾಡುತ್ತೇವೆ, ಅನಕ್ಷರತೆಯನ್ನು ಹೋಗಲಾಡಿಸಿ ತಾಂಡಾದಲ್ಲಿ ಅಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.


ಬಳಿಕ ಮಾತನಾಡಿದ ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಹಿಂದೆ ತಾಂಡಾದ ಪ್ರಮುಖರು ಕುಳಿತು ಸಮಸ್ಯೆ ಬಗೆಹರಿಸುತ್ತಿದ್ದರು. ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿರಲಿಲ್ಲ. ಈಗ ಪರಿಸ್ಥಿತಿ ಭಿನ್ನವಾಗುತ್ತಿದೆ. ಸಾಕ್ಷರತೆಯ ಕೊರತೆ ಒಂದೆಡೆಯಾದರೆ ಸ್ವಲ್ಪ ಸಾಕ್ಷರತೆ ಇದ್ದು, ತಿಳುವಳಿಕೆ ಕಮ್ಮಿ ಇರುವವರ ಸಂಖ್ಯೆ ಇದೆ. ಇದರ ಪರಿಣಾಮ ಸರಿಯಾದ ನಿರ್ಧಾರ ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿ,ಸಮಾಜದ ಸಂಘಟನೆಗಳು ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಬಾರದು. ಸಮಾಜಕ್ಕೊಂದು ಸಲಹಾ ಸಮಿತ ಇರಬೇಕು. ಅವರು ಸೂಚಿಸಿದ್ದನ್ನ ಆಕ್ಷನ್ ಪ್ಲಾನ್ ಮೂಲಕ ಒಂದು ಗುರಿ ಇಟ್ಟುಕೊಂಡು ಜಾರಿಗೆ ತರುವ ಕೆಲಸ ಮಾಡಬೇಕು ಎಂದರು.


ನಂತರ ಮಾತನಾಡಿದ ಕುಮಾರ ಮಹಾರಾಜ, ಬಂಜಾರರನ್ನು ಗೋರ್, ಗೋರ್ ಮಾಟಿ, ಬಂಜಾರ ಎಂದು ೧೫ರಿಂದ ೨೦ ಉಪ ಪಂಗಡಗಳಿಂದ ಕರೆಯಲಾಗುತ್ತಿದೆ. ಲಂಬಾಣಿ ಸಮಾಜದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಸಮುದಾಯದ ಎಲ್ಲರೂ ವಿದ್ಯಾವಂತರಾಗಿ, ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.


ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಅನೇಕ ರಾಜ್ಯದ ಸಂತ ಮಹಾರಾಜರು, ಮಾತೆಯರು ಮತ್ತು ಗೋರ ಸಿಖವಾಡಿ ಮತ್ತು ಗೋರಸೇನಾದ ರಾಜ್ಯದ ಕಾರ್ಯಕರ್ತರು ಭಾಗವಹಿಸಿದ್ದರು.

Exit mobile version