ಸಾಲದ ಕೂಪಕ್ಕೆ ಸಿಲುಕಿದ್ದ ಒಂದೇ ಗ್ರಾಮದ ಇಬ್ಬರು ರೈತರು ಆತ್ಮಹತ್ಯೆ!

ಹಾವೇರಿ : ಸಾಲದಿಂದ ನರಳಿದ್ದ ಒಂದೇ ಗ್ರಾಮದ ಇಬ್ಬರು ರೈತರು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಮೂರು ಎಕರೆ ಜಮೀನು ಹೊಂದಿದ್ದ ಮಂಜಪ್ಪ, ಬ್ಯಾಂಕ್ ಮತ್ತು ಕೈಗಡವೆದು ಸುಮಾರು ರೂ. 8 ಲಕ್ಷ ಸಾಲ ಮಾಡಿಕೊಂಡಿದ್ದರು. ಮೆಕ್ಕೆ ಜೋಳ ಮತ್ತು ಈರುಳ್ಳಿ ಬೆಳೆ ಹಾಳಾಗಿದ್ದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  

ಮಹೇಶ್ ಪರಸಳ್ಳಿ(38) ಮತ್ತು ಮಂಜಪ್ಪ ಕರಿಯಪ್ಪನವರ (44) ಆತ್ಮಹತ್ಯೆ ಮಾಡಿಕೊಂಡ ರೈತರು. ಒಂದೂವರೆ ಎಕರೆ ಜಮೀನು ಹೊಂದಿದ್ದ ಮಹೇಶ್, ಬ್ಯಾಂಕ್ ಮತ್ತು ಕೈಗಡವೆಂದು ಸುಮಾರು ರೂ. 4.5 ಲಕ್ಷ ಸಾಲ ಮಾಡಿಕೊಂಡಿದ್ದರು. ಈ ರೈತರು ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆ ಬೆಳೆದಿದ್ದರು. ಬೆಳೆ ಹಾಳಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ರೈತರ ಮನೆಗೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. 

Exit mobile version