ಮುಂಡರಗಿ ಅರಣ್ಯಾಧಿಕಾರಿ ದೌರ್ಜನ್ಯ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನ ಸ್ಥಿತಿ ಗಂಭೀರ: ಜಿಲ್ಲಾಧಿಕಾರಿಗೆ ಹಿಡಿ ಶಾಪ ಹಾಕುತ್ತಿರುವ ರೈತರು


ಗದಗ: ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕೇಲೂರು ಗ್ರಾಮದಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಿ ಅವರ ಹೊಲವನ್ನು ಕಸಿದುಕೊಳ್ಳಲು ಯತ್ನಿಸಿದಾಗ ರೈತ ಮಹಿಳೆಯರು ಮತ್ತು ಅಲ್ಲಿದ್ದ ಎಲ್ಲರು ಪರಿ ಪರಿಯಾಗಿ ಬೇಡಿಕೊಂಡರು ಅದನ್ನು ಕ್ಯಾರೆ ಅನ್ನದ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅವರ ಮೇಲೆ ದೌರ್ಜನ್ಯ ಮಾಡಿ ಅವರನ್ನು ಹೆದರಿಸಿ ಬೆದರಿಸಿದ. ಬೆನ್ನಲ್ಲೇ ಮನನೋಂದು ಇಬ್ಬರು ಮಹಿಳೆಯರು ವಿಷಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದರು ಅವರನ್ನು ಆಸ್ಪತ್ರೆಗೆ ಸಾಗಿಸದೇ ಇರುವುದು ಅಧಿಕಾರಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಇಬ್ಬರು ಮಹಿಳೆಯರಾದ 1. ಸರೋಜವ್ವ ಶಾಂತಗೌಡ ಪಾಟೀಲ 2. ನಿರ್ಮಲಾ ರಾಮನಗೌಡ ಪಾಟೀಲ ಹೊಲ ಹೋದ ಮೇಲೆ ಬದುಕಿ ಎನೂ ಪ್ರಯೋಜನ ಎಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆಲೂರು ಗ್ರಾಮದಲ್ಲಿ ನಡೆದಿದೆ. ಅವರನ್ನು ಅಸ್ಪತ್ರೆಗೆ ಸ್ಥಳಿಯರು ಸಾಗಿದ್ದಾರೆ ಆದರೂ ಅವರ ಸ್ಥಿತಿ ಗಂಭಿರ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಈ ಘಟನೆಯ ಬಗ್ಗೆ ಗಮನಿಸಿದಿರುವುದು. ಜಿಲ್ಲಾಡಳಿತದ ಕಾರ್ಯ ವೈಖರಿಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆ ಗಾಗಿ ಗದಗ ಆಸ್ಪತ್ರೆಗೆ ದಾಖಲು ಮಾಡಲು ಶಿಫಾರಸ್ಸು ಮಾಡಿದ್ದಾರೆ.

ಅರಣ್ಯ ಅಧಿಕಾರಿ ಊಟಮಾಡುತ್ತಾ ಕುಳಿತದ್ದು ಅವನ ಕ್ರೌರ್ಯಕ್ಕೆ ಅಲ್ಲಿಯ ಜನರು ಶಾಪ ಹಾಕುತ್ತಿದ್ದಾರೆ.
ಈಗಲಾದರೂ ಅರಣ್ಯ ಇಲಾಖೆ ತನ್ನ ದೌರ್ಜನ್ಯವನ್ನು ನಿಲ್ಲಿಸುತ್ತಾ ಕಾದು ನೋಡಬೇಕಾಗಿದೆ.

Exit mobile version