ಕೆಂಪುರಾಜನಿಗೆ ಡಿಮ್ಯಾಂಡಪ್ಪೂ..ಡಿಮ್ಯಾಂಡು! ಬೆಳೆ ಇತ್ತು ಬೆಲೆ ಇರಲಿಲ್ಲ, ಈಗ ಬೆಳೆ ಇಲ್ಲ ಬೆಲೆ ಇದೆ…!

ಸುರೇಶ್ ಎಸ್.ಲಮಾಣಿ

ಲಕ್ಷ್ಮೇಶ್ವರ: ಅತಿವೃಷ್ಟಿ ಮತ್ತು ಅನಾವೃಷ್ಟಿ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಜೀವನದುದ್ದಕ್ಕೂ ಕಂಬದ ಪೆಟ್ಟು ಕಪಾಳದ ಪೆಟ್ಟು ಅನುಭವಿಸುವಲ್ಲಿ ರೈತನೆ ಪ್ರಮುಖ.

ಮಳೆ ಹೋಗಿ ಬಿತ್ತಿದ ಬೀಜಗಳು ಮೂಳಕೆಯ ಹಂತದಲ್ಲಿಯೇ ಬಾಡುವುದು, ಇಲ್ಲವೇ ಬೆಳೆದು ನಿಂತ ಬೆಳೆಗಳು ಮಳೆಗೆ ಆಹುತಿಯಾಗುವುದು, ಬೆಳೆಗಳೆಲ್ಲ ನಾಶವಾಗಿ ಹೆಚ್ಚು ಮೋರೆ ಹಾಕುವುದು ರೈತನ ಸ್ಥಿತಿಯಾಗಿದೆ.

ಈಗ ಅತಿವೃಷ್ಟಿಯಿಂದಾಗಿ ರೈತರು ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಸಂಪೂರ್ಣ ನಾಶವಾಗಿದ್ದರಿಂದ ಇರುವ ಅಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕೆಂಪು ಮೆಣಸಿನಕಾಯಿಗೆ ಭಾರಿ ಡಿಮ್ಯಾಂಡ ಬಂದಿದೆ.

ತಾಲೂಕಿನ ಮಾಡಳ್ಳಿ,ಯಳವತ್ತಿ ಯತ್ನಳ್ಳಿ, ಗೊಜನೂರು, ಲಕ್ಷ್ಮೇಶ್ವರ, ಗೋನಾಳ, ರಾಮಗೇರಿ, ಬಸಾಪೂರ ಸೇರಿದಂತೆ ಕೆಲವು ಪ್ರದೇಶದಲ್ಲಿ ಬೆಳೆಯುವ ಅಂದರೆ ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಸಂಪೂರ್ಣ ನಾಶವಾಗಿದ್ದು ಗದಗ-ದಾರವಾಡ-ಹಾವೇರಿ ಜಿಲ್ಲೆಯಲ್ಲಿ ಬೆಳೆಯುವ ಈ ಬೆಳೆ ಸತತ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತು ಬೆಳೆ ಕೊಳೆತು ನಾಶವಾಗಿತ್ತು. ಹೀಗಾಗಿ ಅಳಿದುಳಿದ ಬೆಳೆಗೆ ಇದೀಗ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೆಲೆ ಬಂದಿದೆ.

ಸರ್ಕಾರಗಳು ನೆರವಿಗೆ ಬರಬೇಕು

ಮೂರು ಎಕರೆ ಜಮೀನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೆ ವಿಪರಿತ ಮಳೆಯಿಂದಾಗಿ ಒಂದು ಕ್ವೀಂಟಲ್ ಕಾಯಿಯೂ ಬಂದಿಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ40 ರಿಂದ 50 ಸಾವಿರಕ್ಕೆ ಮಾರಾಟವಾಗುತ್ತಿದೆ. ನಮ್ಮ ಹಣೆಬರವೇ ಇಷ್ಟು ಸಮೃದ್ಧ ಫಸಲು ಬಂದಾಗ ಮಾರುಕಟ್ಟೆಯಲ್ಲಿ ಕೇಳುವವರೆ ಇರುವುದಿಲ್ಲ. ಈಗ ಫಸಲೇ ಬಂದಿಲ್ಲ ಬೆಲೆ ಗಗನಮುಕಿ ಆಗುತ್ತಿದೆ. ಹಲ್ಲು ಇದ್ದರೆ ಕಡಲೆ ಇಲ್ಲ ಕಡಲೆ ಇದ್ದರೆ ಹಲ್ಲು ಇಲ್ಲ ಎನ್ನುವ ಸ್ಥಿತಿ ರೈತರದ್ದಾಗಿದೆ. ಸರಕಾರ ಈ ತೋಟಗಾರಿಕಾ ಬೆಳೆಯನ್ನು ಸಾಂಬಾರ ಮಂಡಳಿ ರೀತಿಯಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ಖರೀದಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಳಿ ಯಿಂದ ನ್ ಸ್ಥಾಪಿಸಿ ನೆರವಿಗೆ ಬರಬೇಕು.

ಪರಸಪ್ಪ ಕಟ್ಟಿಮನಿ,ರಾಮಗಿರಿ ಗ್ರಾಮದ ರೈತ

ಕೆಂಪುರಾಜನಿಗೆ ಬಾರಿ ಡಿಮ್ಯಾಂಡು ಬಂದಿದ್ದು ಪ್ರತಿ ಕ್ವಿಂಟಲ್ ಗೆ ಕಡ್ಡಿಗಾಯಿಗೆ 25 ಸಾವಿರದಿಂದ 45 ಸಾವಿರ ರೂ, ಬೆಲೆ ಬಂದಿದ್ದು ಅದರಲ್ಲೂ ವಿಶೇಷವಾಗಿ ದೇವನೂರ, ಅಂತೂರ- ಬೆಂತೂರ ಮೆಣಸಿನಕಾಯಿಗೆ 50,000 ವರೆಗೂ ಬೇಡಿಕೆಯಿದೆ. ಇತ್ತೀಚೆಗೆ ಡಬ್ಬಿ ಕಾಯಿ 60,000 ರೂ ಗಳಿಗೆ ಮಾರಾಟವಾಗಿ ಇತಿಹಾಸ ನಿರ್ಮಿಸಿದೆ.

Exit mobile version