ಈರುಳ್ಳಿ ಬೆಳೆದ ರೈತನ ಬದುಕು ಬೀದಿಗೆ…ಈರುಳ್ಳಿ ಕಂಡರೆ ಓಡುತ್ತಿರುವ ಗ್ರಾಹಕ!

ಬೆಂಗಳೂರು : ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಹೀಗಾಗಿ ಈರುಳ್ಳಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಹೊಟೇಲ್, ಡಾಬಾ, ರೆಸ್ಟೋರೆಂಟ್ ಗಳು ಸೇರಿದಂತೆ ಆಹಾರ ಪದಾರ್ಥ ತಯಾರಿಕಾ ಉದ್ಯಮಗಳಲ್ಲಿ ಈರುಳ್ಳಿ ಬಳಕೆಯನ್ನು ಮಿತಿಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರಿಗೆ ರುಚಿ ಇಲ್ಲದಂತಾಗಿದೆ.

ಕಳೆದ ವರ್ಷ ಡಿಸೆಂಬರ್‌ ನಲ್ಲಿ ಕೂಡ ಈರುಳ್ಳಿಯ ಬೆಲೆ ಇದೇ ರೀತಿ ಗಗನಕ್ಕೆ ಏರಿಕೆ ಕಂಡಿತ್ತು. ಆ ಸಂದರ್ಭದಲ್ಲಿ ಈರುಳ್ಳಿಯ ಬೇಲೆ ರೂ. 150-180 ಇತ್ತು. ಸದ್ಯ ಇದರ ಬೆಲೆ ರೂ. 100ರ ಆಸುಪಾಲಿಗೆ ಬಂದಿದೆ. ಆದರೆ, ಸದ್ಯ ಕೊರೊನಾ ಹಾವಳಿಯಿಂದ ಪ್ರತಿಯೊಬ್ಬರೂ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಜನರು ಈರುಳ್ಳಿ ಸಹವಾಸ ಬೇಡ ಎನ್ನುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಪ್ರತಿ ಕೆಜಿಗೆ ರೂ. 100ರಷ್ಟಾಗಿದೆ. ಅಲ್ಲದೇ, ಉತ್ತಮ ಗಡ್ಡೆಗಳು ಅದಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಹೀಗಾಗಿ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈರುಳ್ಳಿ ದೋಸೆ, ಬೋಂಡ, ವಡೆಗಳಿಗೆ ಈರುಳ್ಳಿ ಬಳಕೆ ಕಡಿಮೆಯಾಗಿದೆ.

ದೇಶಕ್ಕೆ ಅವಶ್ಯವಿರುವ ಶೇ. 50ರಷ್ಟು ಈರುಳ್ಳಿ ಬೆಳೆಯನ್ನು ಮಹಾರಾಷ್ಟ್ರದಲ್ಲಿಯೇ ಬೆಳೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ನೆಲಕಚ್ಚಿದೆ. ಪರಿಣಾಮವಾಗಿ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಇದರ ಉಪಯೋಗವೇ ಅರ್ಧದಷ್ಟಕ್ಕೆ ನಿಂತಿದೆ.

Exit mobile version