24 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಯಾವ ಶಾಸಕರಿಗೆ ಯಾವ ನಿಗಮ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.

ಬೆಂಗಳೂರು: ಅರಗಜ್ಞಾನೇಂದ್ರ(ಕರ್ನಾಟಕ ಗೃಹ ಮಂಡಳಿ), ಎಂ.ಚಂದ್ರಪ್ಪ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ) ನರಸಿಂಹ ನಾಯಕ(ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ), ಎಂ.ಪಿ.ಕುಮಾರಸ್ವಾಮಿ (ಕರ್ನಾಟಕ ಮಾರುಕಟ್ಟೆ ಎಜೆನ್ಸಿ ಲಿಮಿಟೆಡ್), ಎ.ಎಸ್.ಪಾಟೀಲ್ ನಡಹಳ್ಳಿ(ಆಹಾರ, ನಾಗರಿಕ ಸರಬರಾಜು ನಿಗಮ), ಎಚ್.ಹಾಲಪ್ಪ(ಎಮ್.ಎಸ್.ಐ.ಎಲ್), ಮಾಡಾಳ್ ವೀರುಪಾಕ್ಷಪ್ಪ(ಸಾಬೂನು ಮತ್ತು ಮಾರ್ಜಕ ನಿಗಮ), ಜಿ.ಎಚ್.ತಿಪ್ಪಾರಡ್ಡಿ(ದೇವರಾಜ ಅರಸು ನಿಗಮ), ಶಿವನಗೌಡ ನಾಯಕ (ರಸ್ತೆ ಅಭಿವೃದ್ಧಿ ನಿಗಮ), ಕಳಕಪ್ಪ ಬಂಡಿ(ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ), ಪರಣ್ಣ ಮುನವಳ್ಳಿ(ಕೆಎಸ್ಎಫ್ಸಿ), ಸಿದ್ದು ಸವದಿ(ಕೈಮಗ್ಗ ಅಭಿವೃದ್ಧಿ ನಿಗಮ), ಪ್ರೀತಂ ಗೌಡ(ಅರಣ್ಯ, ವಿಹಾರ ಧಾಮಗಳ ಸಂಸ್ಥೆ), ರಾಜಕುಮಾರ್ ಪಾಟೀಲ್ ತೇಲ್ಕೂರ್(ಈಶಾನ್ಯ ಕರ್ನಾಟಕ ಸಾರಿಗೆ), ದತ್ತಾತ್ರೇಯ ಪಾಟೀಲ್ ರೇವೂರ್(ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ), ಶಂಕರ ಪಾಟೀಲ್ ಮುನೇನಕೊಪ್ಪ(ನಗರ ಮೂಲಭೂತ ಸೌಕರ್ಯ ನಿಗಮ), ಎಚ್.ನಾಗೇಶ್ (ತೆಂದು ನಾರಿನ ಅಭಿವೃದ್ಧಿ ನಿಗಮ), ಎಸ್.ವಿ.ರಾಮಚಂದ್ರ(ವಾಲ್ಮೀಕಿ ಅಭಿವೃದ್ಧಿ ನಿಗಮ), ನೇಹರು ಓಲೇಕಾರ್(ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮ), ದುರ್ಯೋಧನ ಐಹೊಳೆ(ಖಾದಿ ಮತ್ತು ಗ್ರಾಮೋದ್ಯೋಗ), ಬಾಲಾಜಿ ಮೆಂಡನ್(ಹಿಂದುಳಿದ ವರ್ಗಗಳ ಆಯೋಗ), ಬಸವರಾಜ್ ದಡೇಸೂರ್ (ಸಮಾಜ ಕಲ್ಯಾಣ ಮಂಡಳಿ), ಶಿವರಾಜ ಪಾಟೀಲ್(ಜೈವಿಕ ಇಂಧನ ಮಂಡಳಿ), ಸಿ.ಎಸ್.ನಿರಂಜನಕುಮಾರ್(ಅರಣ್ಯ ಕೈಗಾರಿಕಾ ನಿಗಮ)

Exit mobile version