ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಲಕ್ಷ್ಮೇಶ್ವರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಲಕ್ಷ್ಮೇಶ್ವರ ತಾಲೂಕ ಘಟಕ ಅಧ್ಯಕ್ಷ ಸದಾನಂದ ನಂದೆಣ್ಣವರ ಮಾತನಾಡಿ, ರಾಜ್ಯದಲ್ಲಿ ಮರಾಠ ಸಮುದಾಯದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ದಿಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಕ್ರಮ ಕೈಗೊಂಡು ಜನತೆ 50 ಕೋಟಿ ಅನುದಾನ ಮೀಸಲಿಡಬೇಕು ಎಂದು ಸರ್ಕಾರದ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಕರ್ನಾಟಕ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಅವೈಜ್ಞಾನಿಕ ಇಂತಹ ಅವೈಜ್ಞಾನಿಕ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ಯಾರು ನೀಡಿದ್ದಾರೋ ತಿಳಿದಿಲ್ಲ ಎಂದು ಹೇಳಿದರು.

ಮರಾಠ ಪ್ರಾಧಿಕಾರವನ್ನು ಕೈಬಿಡಬೇಕು ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕುಮಾರ ಬೇಟಗೇರಿ, ಶಿವರಾಜ ಹರಿಜನ, ಪ್ರವೀಣ ಆಚಾರಿ, ಮಂಜುನಾಥ ಗೌರಿ, ಮಹಾಂತೇಶ ಗುಡಿಸಲಮನಿ, ಮಂಜುನಾಥ ಕೊಡಳ್ಳಿ, ಮಹಾತೇಶ ಕುಂಬಾರ, ರವಿ ಸವದತ್ತಿ, ಗಣೇಶ ಭಜಕ್ಕನವರ, ಹುಲ್ಲೇಶ ಗಡದವರ, ರಾಕೇಶ ಭೀಮಣ್ಣವರ ಸೇರಿ ಅನೇಕರು ಇದ್ದರು.

Exit mobile version