ಗದಗ ಜಿಲ್ಲೆ ಕೊರೋನಾ ಗ್ರಹಣ-2:ಈ ಕರಾಳ 24 ದಿನದ ಸರಾಸರಿ: ದಿನಕ್ಕೆ 11 ಪಾಸಿಟಿವ್, 3 ದಿನಕ್ಕೊಂದು ಸಾವು

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ:

 ಕಳೆದ 24 ದಿನಗಳು ಗದಗಜಿಲ್ಲೆಯ ಪಾಲಿಗೆ ಕರಾಳ ದಿನಗಳು. ಈ ಅವಧಿಯಲ್ಲಿ ಸರಾಸರಿ ದಿನಕ್ಕೆ 11 ಹೊಸ ಪಾಸಿಟಿವ್ ಸೇರ್ಪಡೆಯಾದರೆ, 3 ದಿನಕ್ಕೊಂದು ಸಾವು ಸಂಭವಿಸಿದೆ.

ಗದಗ: ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ.  ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.

ಇಂದು ಈ ಕರಾಳ 24 ದಿನಗಳ ಅವಧಿಯಲ್ಲಿ ದಿನದ ಸರಾಸರಿ ಲೆಕ್ಕವನ್ನು ಪ್ರಕಟಿಸುತ್ತಿದ್ದೇವೆ.

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವಿನ ಸಂಖ್ಯೆ
ಜೂನ್ 20     60   19   39     02
ಜುಲೈ 14    331  143  178    10
24 ದಿನದಲ್ಲಿ ಹೆಚ್ಚಳ    271  124  139    08
ಸರಾಸರಿ (ಪ್ರತಿದಿನಕ್ಕೆ)     11.3  5.16   5.18 0.33 ( 3 ದಿನಕ್ಕೆ 1 ಸಾವು
ಪ್ರತಿದಿನದ ಸರಾಸರಿ

ಈ ಕರಾಳ 24 ದಿನದಲ್ಲಿ  ಸರಾಸರಿ (ಜೂನ್ 20- ಜುಲೈ 14)

·       ಪ್ರತಿದಿನ 11 ಹೊಸ ಪಾಸಿಟಿವ್

·       ಪ್ರತಿದಿನ 5 ಸಕ್ರಿಯ

·       ಪ್ರತಿದಿನ 5 ಗುಣಮುಖ

·       ಪ್ರತಿ 3 ದಿನಕ್ಕೊಂದು ಸಾವು.

Exit mobile version