ಗದಗ ಜಿಲ್ಲೆ: ಜೂನ್ 21- ಜುಲೈ18 :28 ದಿನದ ಕೋರೊನಾ ಕರಾಳತೆ : ದಿನಕ್ಕೆ 17-18 ಹೊಸ ಪಾಸಿಟಿವ್: 28 ದಿನದಲ್ಲಿ ಶೇ.89 ಹೆಚ್ಚಳ

corona gadag karnataka

ಗದಗ ಜಿಲ್ಲೆಯಲ್ಲಿ ಇಂದೂ ಕೂಡ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

 

 ಕಳೆದ 28 ದಿನಗಳು ಗದಗ ಜಿಲ್ಲೆಯ ಪಾಲಿಗೆ ಕರಾಳ ದಿನಗಳು. ಈ ಅವಧಿಯಲ್ಲಿ ಸರಾಸರಿ ದಿನಕ್ಕೆ 17-18 ಹೊಸ ಪಾಸಿಟಿವ್ ಸೇರ್ಪಡೆಯಾಗಿವೆ. ಸೋಂಕಿತರ ಸಂಖ್ಯೆಯಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ.

ಗದಗ: ಶನಿವಾರ ಜುಲೈ 18ರಂದು ಗದಗ ಜಿಲ್ಲೆಯಲ್ಲಿ 82 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 555 ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ  325 ತಲುಪಿದ್ದು, ಗುಣಮುಖರಾದವರ ಸಂಖ್ಯೆ 220 ಇದೆ. ಅಂದರೆ ಸಕ್ರಿಯ ಕೇಸುಗಳ ಸಂಖ್ಯೆ ಗುಣಮುಖರಾದವರ ಸಂಖ್ಯೆಗಿಂತ 105 ಹೆಚ್ಚಿರುವುದನ್ನು ಇಲ್ಲಿ ಗಮನಿಸಬೇಕು.

ಜೂನ್ 20 ರಂದು ಒಟ್ಟು ಸೋಂಕಿತರ ಸಂಖ್ಯೆ 60 ಮಾತ್ರ ಇತ್ತು. ಸಕ್ರಿಯ ಕೇಸ್ ಸಂಖ್ಯೆ 19 ಇದ್ದು,  ಗುಣಮುರಾದವರ ಸಂಖ್ಯೆ 39 ಇತ್ತು. ಜೂನ್ 21-ಜುಲೈ 18ರ ಈ ಅವಧಿಯಲ್ಲಿ ಹೊಸದಾಗಿ 495 ಸೋಂಕಿತ ಪ್ರಕರಣ ದಾಖಲಾಗಿವೆ. ಅಂದರೆ ಈ 28 ದಿನದಲ್ಲಿ ದಿನಕ್ಕೆ ಸರಾಸರಿ 17-18 ಪ್ರಕರಣ ದಾಖಲಾಗಿವೆ.

ಕಳೆದ 4 ದಿನದಲ್ಲಿ (ಜುಲೈ 15-18) 224  ಹೊಸ ಪಾಸಿಟಿವ್ ಕೇಸ್ ದಾಖಲಾಗಿವೆ. ಈ 4 ದಿನದಲ್ಲಿ ದಿನಕ್ಕೆ ಸರಾಸರಿ 56 ಹೊಸ ಪ್ರಕರಣ ದಾಖಲಾಗಿವೆ.

28 ದಿನದಲ್ಲಿ ಸರಾಸರಿ ಮತ್ತು ಶೇಕಡಾವಾರು ಹೆಚ್ಚಳ ತೋರಿಸುವ ಕೋಷ್ಟಕ

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವಿನ ಸಂಖ್ಯೆ
ಜೂನ್ 20     60   19   39     02
ಜುಲೈ 18    555  325  220    10
28 ದಿನದಲ್ಲಿ ಹೆಚ್ಚಳ   495  306   181    08
 28 ದಿನದಲ್ಲಿ ಸರಾಸರಿ (ಪ್ರತಿದಿನಕ್ಕೆ)   17-18  10.92   6.46 0.28    
28 ದಿನದಲ್ಲಿ ಶೇಕಡಾ ಹೆಚ್ಚಳ   89.18 %  94.15 %   82.27  80.0 %

ಈ ಕರಾಳ 28 ದಿನದಲ್ಲಿ  ಸರಾಸರಿ (ಜೂನ್ 20- ಜುಲೈ 18)

·       ಪ್ರತಿದಿನ 17-18 ಹೊಸ ಪಾಸಿಟಿವ್

·       ಪ್ರತಿದಿನ 11 ಸಕ್ರಿಯ

·       ಪ್ರತಿದಿನ 6-7 ಗುಣಮುಖ

ಈ ಕರಾಳ 28 ದಿನದಲ್ಲಿ  ಶೇಕಡಾವಾರು ಹೆಚ್ಚಳ(ಜೂನ್ 20- ಜುಲೈ 18)

·       ಸೋಂಕಿತರ ಸಂಖ್ಯೆ ಶೇ. 89.18 ಹೆಚ್ಚಳ

·       ಸಕ್ರಿಯ ಕೇಸ್ ಸಂಖ್ಯೆ ಶೇ. 94.15 ಹೆಚ್ಚಳ

·       ಗುಣಮುಖರ ಸಂಖ್ಯೆ ಶೇ. 82.27 ಹೆಚ್ಚಳ

·       ಸಾವಿನ ಸಂಖ್ಯೆ ಶೇ. 80 ಹೆಚ್ಚಳ

Exit mobile version