ಕೊರ್ಲಹಳ್ಳಿ ಟೋಲ್ ನಾಕಾ ಸಿಬ್ಬಂದಿ ಗೂಂಡಾಗಿರಿ..!

ಮುಂಡರಗಿ: ಟೋಲ್ ನಾಕಾ ಹಣದ ವಿಚಾರಕ್ಕೆ ಸಂಬಂಧ ಪಟ್ಟಂತೆ ಟೋಲ್ ಸಿಬ್ಬಂಧಿಗಳು ಗೂಂಡಾಗಿರಿ ನಡೆಸಿದ್ದು ನಾಲ್ವರನ್ನು ಥಳಿಸಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗೇಟ್ ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ.

ದೂರುದಾರರಾದ ಶಿವಕುಮಾರ್, ಮಾರುತಿ, ನಿಂಗಪ್ಪ ಅವರು ಟೋಲ್ ಬಳಿ ಬಂದಾಗ ಟೋಲ್ ಸಿಬ್ಬಂಧಿ ಹಣ ಕೇಳಿದ್ದಾರೆ. ಅದಕ್ಕೆ ಅವರು ಪಾಸ್ ಟ್ಯಾಗ್ ಇದೆ ಎಂದು ಹೇಳಿದ್ದಕ್ಕೆ ಮದರಸಾಬ ಸಿಂಗನಮಲ್ಲಿ, ಚೇತನ್, ವಿನಾಯಕ, ಶಬ್ಬೀರ್ ನಾಲ್ವರು ಸೇರಿ ತಮಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಇನ್ನು ಮತ್ತೊಂದು ದೂರಿನಲ್ಲಿ ಮಾಬುಸಾಬ್ ಎಂಬುವವರು ಸಿಂಗಟಾಲೂರಿನಿಂದ ಮುಂಡರಗಿಗೆ ಬರುವಾಗ ತಾವು ದಿನಕ್ಕೆ ನಾಲ್ಕೈದು ಬಾರಿ ಈ ಮಾರ್ಗವಾಗಿ ಓಡಾಡುವುದರಿಂದ ಟೋಲ್ ಪಾಸ್ ಕೇಳಿದ್ದು, ಇದರಿಂದ ಸಿಟ್ಟಿಗೆದ್ದ ಮದರಸಾಬ ಸಿಂಗನಮಲ್ಲಿ, ಚೇತನ್ ಸೇರಿ ತಮ್ಮ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಾಗಿದೆ. ದೂರು ದಾರರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.

Exit mobile version