ಟೋಲ್ ಗಳಲ್ಲಿ ಶುಲ್ಕ ವಿನಾಯಿತಿಗೆ ಒತ್ತಾಯಿಸಿ ಮನವಿ

ಗದಗ: ರಾಜ್ಯ ಹೆದ್ದಾರಿ 45ರ ಪಾಪನಾಶಿ ಹಾಗೂ ಕೊರ್ಲಹಳ್ಳಿ ಬಳಿಯ ಟೋಲ್ ಪ್ಲಾಜಾಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಗುರುವಾರ ಗೂಡ್ಸ್ ಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರೈತರ ಕೃಷಿ ಉತ್ಪನ್ನಗಳು ಸೇರಿದಂತೆ ಜನಸಾಮಾನ್ಯರ ದಿನ ನಿತ್ಯದ ಜೀವನಾವಶ್ಯಕ ಅಗತ್ಯ ವಸ್ತುಗಳ ಸಾಗಾಟದಲ್ಲಿ ತೊಡಗಿರುವ ಸರಕು ಸಾಗಾಣಿಕೆ ವಾಹನಗಳಿಗೆ ನೀಡುತ್ತಿರುವ ಶುಲ್ಕ ಜನರಿಗೆ ಮತ್ತು ವಾಹನ ಮಾಲಿಕರಿಗೆ ಹೊರೆಯಾಗುತ್ತಿದ್ದು, ಕೂಡಲೇ ಸರಕು ಸಾಗಾಣಿಕೆ ಮತ್ತು ಟೋಲ್ ಸಂಗ್ರಹ ಗುತ್ತಿಗೆದಾರರ ಮಧ್ಯೆ ಚರ್ಚೆ ನಡೆಸಿ ಟೋಲ್ ಗಳಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಗದಗ ಗೂಡ್ಸ್ ಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಆಶೀಫ್ ಡಂಬಳ, ಕಾರ್ಯದರ್ಶಿ ಅನ್ವರ ಹುಲ್ಲೂರು, ಸಹ ಕಾರ್ಯದರ್ಶಿ ಶ್ರೀಕಾಂತ ರಾಯರಡ್ಡಿ, ಖಜಾಂಚಿ ಕಂಬಾಳಿಮಠ ಮುಂತಾದವರು ಉಪಸ್ಥಿತರಿದ್ದರು.

Exit mobile version