ದೇಶದಲ್ಲಿ ಕೊರೊನಾ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಲಿದೆಯೇ?

corona

corona state update

ನವದೆಹಲಿ : ದೇಶದಲ್ಲಿ ಸದ್ಯ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಆದರೆ, ನವೆಂಬರ್ ವೇಳೆಗೆ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ತಿಳಿಸಿದೆ.

ಈ ಕುರಿತು ಆಪರೇಷನ್ಸ್ ರಿಸರ್ಚ್ ಗ್ರೂಪ್‌ ನಡೆಸಿದ ಸಾಂಖ್ಯಿಕ ಅಧ್ಯಯನ ತಿಳಿಸಿದೆ. ಸದ್ಯ ಪ್ರತಿ ದಿನ 10 ಸಾವಿರಕ್ಕೂ ಅದಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮುಂದೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಜುಲೈ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟ ತಲುಪಬೇಕಿತ್ತು. ಲಾಕ್‌ಡೌನ್‌ ಘೋಷಣೆಯಿಂದಾಗಿ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುವುದು ತಪ್ಪಿದೆ ಎಂದು. ಹೀಗಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಸಮಯ ಸಿಕ್ಕಂತಾಗಿದೆ ಎಂದು ಹೇಳಿದೆ.

17 ವರ್ಗದ ಜನರನ್ನು ಹೈ ರಿಸ್ಕ್‌ ಜನರೆಂದು ಐಸಿಎಂಆರ್‌ ಹೇಳಿದ್ದು ಅವರನ್ನು ತಪಸಾಣೆಗೆ ಒಳಪಡಿಸಿ ಎಂದು ಐಸಿಎಂಆರ್‌ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಎಚ್‌ಐವಿ, ಉಸಿರಾಟ ತೊಂದರೆ, ಕ್ಷಯ, ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳು, ಕಂಟೈನ್ಮೆಂಟ್‌ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು, ಪೊಲೀಸರು, ನಗರದಿಂದ ವಲಸೆ ಬಂದ ಗ್ರಾಮೀಣ ಜನ, ಮಾರುಕಟ್ಟೆಗೆ ಭೇಟಿ ನೀಡುತ್ತಿರುವ ರೈತರು, ವ್ಯಾಪಾರಿಗಳು, ಚಾಲಕರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್‌, ಅಂಚೆ, ದೂರವಾಣಿ ಸಿಬ್ಬಂದಿ, ವಿಮಾನಯಾನ ಸಿಬ್ಬಂದಿ, ವೃದ್ಧಾಶ್ರಮ, ಅನಾಥಶ್ರಮಗಳಲ್ಲಿರುವ ಸಿಬ್ಬಂದಿ, ಜೈಲಿನಲ್ಲಿರುವ ಕೈದಿಗಳನ್ನು ಸಮೀಕ್ಷೆ ನಡೆಸುವಂತೆ ಸೂಚಿಸಿದೆ.

ಗರಿಷ್ಠ ಮಟ್ಟ ತಲುಪುವ ಸಂದರ್ಭದಲ್ಲಿ ತೀವ್ರ ನಿಗಾ ಘಟಕ(ಐಸಿಯು), ವೆಂಟಿಲೇಟರ್‌, ಐಸೋಲೇಷನ್‌ ಹಾಸಿಗೆಗಳ ಕೊರತೆ ಕಾಡಬಹುದು. ಹೀಗಾಗಿ ಲಸಿಕೆ ಬರುವವರೆಗೂ ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮಾಡುತ್ತಲೇ ಇರಬೇಕು ಎಂದು ಎಂದು ತಿಳಿಸಿದೆ.

Exit mobile version