ಉತ್ತರಪ್ರಭ ಸುದ್ದಿ,
ಗದಗ :ಹೌದು ಗದಗ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಇವರ ಹೇಸರಿನಲ್ಲಿ ಸೈಬರ್ ವಂಚಕರು ಫೇಸ್‌ಬುಕ್, ಮೆಸೆಂಜರ್ ಹಾಗೂ ವಾಟ್ಸಾಪ್ ನಲ್ಲಿ ನಕಲಿ ಖಾತೆಯನ್ನು ತೆರೆದು ಅವರ ಫೋಟೊ ಬಳಸಿಕೊಂಡು ವಂಚನೆಗೆ ಮುಂದಾಗಿರುವುದು ಬುಧವಾರ ಬೆಳಕಿಗೆ ಬಂದಿದೆ….!
ಎಲ್ಲರಿಗೂ ತಿಳಿದಿರುವ ಹಾಗೆ ಸೈಬರ್ ವಂಚಕರು ಈಗಾಗಲೆ ಹಲವು ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಮೋಸ ಮಾಡಿದ್ದಾರೆ, ಅದು ನಕಲಿ ಫೆಸ್ ಬುಕ್ ಅಕೊಂಟ್ ಮೂಲಕವಾಗಲಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ ಮಾಡಿರುವ ಫೋಟೊ ಬಳಸಿ ಅಶ್ಲೀಲ ಫೋಟೊ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕವಾಗಲಿ, ಆನಲೈನ್ ಡೆಲಿವರಿಯ ನೆಪದಲ್ಲಿ “ಒಟಿಪಿ” ಕೆಳಿ ಬ್ಯಾಂಕ್ ಖಾತೆಯಲ್ಲಿನ ಹಣ ಲೂಟಿ ಮಾಡುವ ಮೂಲಕವಾಗಲಿ, ಹೀಗೆ ಅನೇಕ ರೀತಿಯಲ್ಲಿ ಆನಲೈನ್ ವಂಚನೆ ಮಾಡುವುದು ಸಹಜವಾಗಿದೆ, ಇದರ ಕುರಿತು ಪೋಲಿಸರು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿರುವುದು ಉಂಟು, ಆದರೆ ಸೈಬರ್ ಖದಿಮರು ಪೋಲಿಸರ ಬಲೆಗೆ ಸಿಕ್ಕಿರುವುದು ಎಲ್ಲೊ ಒಂದೆರೆಡು.
ಆದರೆ ಇಲ್ಲಿ ಗದಗ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಇವರ ಹೇಸರಿನಲ್ಲಿ ಯಾರೋ ಸೈಬರ್ ಖದಿಮರು ನಕಲಿ ಫೇಸ್‌ಬುಕ್ ಅಕೌಂಟ್ ಸೃಷ್ಟಿಸಿ, ಅವರ ಹೆಸರಿನಲ್ಲಿ ವಂಚಿಸಲು ಮುಂದಾಗಿರುವುದು ನೋಡಿದರೆ ಇವರಿಗೆ ಕಡಿವಾಣ ಹಾಕುವುದು ಕಷ್ಟಕರ ಎನಿಸುತ್ತಿದೆ…!
ಪೋಲಿಸರನ್ನೆ ಬಿಡದ ಸೈಬರ್ ವಂಚಕರು ಸಾರ್ವಜನಿಕರಿಗೆ ಮೋಸಮಾಡುವುದು ಇನ್ಯಾವ ಲೆಕ್ಕ..? ಈ ಕುರಿತು ಪೋಲಿಸರು ಸೈಬರ್ ವಂಚಕರನ್ನು ಹೀಡಿದು ಸೂಕ್ತ ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಿರಲಿ ಎಂದು ಆಶಿಸುತ್ತೆನೆ.
ಸಾರ್ವಜನಿಕರೆ ಹುಷಾರ್..!
ಸಾರ್ವಜನಿಕರು ಸೈಬರ್ ವಂಚಕರಿಂದ ಮೋಸಕ್ಕೆ ಒಳಗಾಗದೆ, ಎಚ್ಚರದಿಂದಿರಲು ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಈ ಪ್ರಕರಣ ಕುರಿತು ಗದಗ ಸಿಇಎನ್ ಪೊಲೀಸ್ ಠಾಣೆ ಗುನ್ನೆ ನಂ:71/2024 ಕಲ ಕಲಂ:66(ಡಿ)ಐ.ಟಿ ಆ್ಯಕ್ಷ-2008. ಮತ್ತು 319(2) ಬಿಎನ್‌ಎಸ್ ನೇ ಪ್ರಕರಣದಲ್ಲಿ ಫೇಕ್ ಫೆಸಬುಕ್ ಐಡಿ ಮುಖಾಂತರ ವಂಚನೆ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ದಿನಾಂಕ: 06/11/2024 ರಂದು ಯಾರೋ ಸೈಬರ ವಂಚಕರು B S Nemagouda Ips ಎಂಬ ನಕಲಿ ಫೆಸಬುಕ್ ಐಡಿಯಲ್ಲಿ ಗದಗ ಜಿಲ್ಲೆಯ ಎಸ್‌ಪಿ ರವರ ಪೊಟೋವನ್ನು ಪ್ರೊಫೆಲ್ ಆಗಿ ಇಟ್ಟುಕೊಂಡು ಮತ್ತು ವಾಟ್ಸ್‌ಪ್‌ದ ಡಿಪಿಯಾಗಿ ಫೋಟೊವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ಗದಗ ಸಿಇಎನ್ ಠಾಣೆಯಲ್ಲಿ ಗುನ್ನಾ ನಂ: 71/2024 ಕಲಂ 66(ಡಿ)ಐ.ಟಿ ಆ್ಯಕ್ಟ-2008. ಮತ್ತು 319(2) ಬಿಎನ್‌ಎಸ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆಂದು ತಿಳಿಸಿದ್ದಾರೆ. ಕಾರಣ ಯಾವುದೇ ಸಾರ್ವಜನಿಕರು ಮೋಸ ಹಾಗೂ ವಂಚನೆಗೆ ಒಳಗಾಗಬಾರದು ಅಂತಾ ಸಾರ್ವಜನಿಕರಲ್ಲಿ ಈ ಮೂಲಕ ಕೋರಲಾಗಿದೆ.
