ಸಿ.ಸಿ.ಟಿ.ವಿ ಅಳವಡಿಕೆಗಾಗಿ ಕಬನೂರ ಗ್ರಾಮಸ್ಥರಿಂದ ಪ್ರತಿಭಟನೆ

ಉತ್ತರಪ್ರಭ

ಹಾವೇರಿ/ಶಿಗ್ಗಾಂವ: ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಪಂಚಾಯತಿಗೆ ಬರುವದಿಲ್ಲ ಹಾಗಾಗಿ ಪಂಚಾಯತಿಯಲ್ಲಿ ಸಿ.ಸಿ.ಟಿ.ವಿ ಅಳವಡಿಸಬೇಕೆಂದು ಕಬನೂರು ಗ್ರಾಮಸ್ಥರ ಪ್ರತಿಭಟನೆ ನಡೆಸಿದರು.

ಗುರುವಾರ ಕಬನೂರ ಗ್ರಾ.ಪಂ ಆವರಣದಲ್ಲಿ ಪ್ರತಿಭಟನಾ ನಿರತ ಧರ್ಮರಾಜ ಅವರು ಮತಾನಾಡಿ ನಾವು ಎರೆಡು- ಮೂರು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೆವೆ. ಇದರ ಕುರಿತು ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದೆವೆ. ಆದರು ಏನು ಪ್ರಯೋಜನ ಆಗಿಲ್ಲಾ. ನಮ್ಮ ಮನವಿಗೆ ಸಂಭಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಪಂಚಾಯತಿಗೆ ಬೀಗ ಹಾಕಿ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಕರಬಸಪ್ಪ ಈಟಿ, ರಮೇಶ ಗೊರವರ, ನಾಗಪ್ಪ ದೊಡ್ಡಮನಿ, ಬರಮಪ್ಪ ಓಲೇಕಾರ ಗೌಸುಸಬ ಮುಲ್ಲಾನವರ, ಮಹೇಶ ಮಲ್ಲೂರ ಹಾಗೂ ಗ್ರಾಮಸ್ಥರು ಉಪಸ್ಥಿತರೀದ್ದರು.

Exit mobile version