ನಂದಿನಿ ಮಳಿಗೆಯಲ್ಲಿ ಸಿಹಿ ಉತ್ಸವಕ್ಕೆ ಚಾಲನೆ- ಉತ್ಪನ್ನಗಳ ಮೇಲೆ 20•/• ರಿಯಾಯಿತಿ

ಉತ್ತರಪ್ರಭ
ಆಲಮಟ್ಟಿ:
ಕ್ರಿಸ್ಮಸ್, ನ್ಯೂಇಯರ್, ಸಂಕ್ರಾಂತಿ ಹೀಗೆ ಒಂದರ ಹಿಂದೆ ಒಂದೊಂದು ವಿಶೇಷ ಹಬ್ಬಗಳು ಎದುರುಗೊಳ್ಳುತ್ತಿವೆ. ಈ ಸಂಭ್ರಮ ಮತ್ತಷ್ಟು ಸಿಹಿಯಾಗಿ ಹಂಚಿಕೊಳ್ಳಲು ಕೆಎಂಎಫ್ ಗ್ರಾಹಕರಿಗೆ ಸಿಹಿ ಉಡುಗೊರೆಯ ಕೊಡುಗೆ ರಿಯಾಯಿತಿ ದರದ ಮೂಲಕ ನೀಡಿದೆ. ಪರಿಣಾಮ ಗ್ರಾಹಕ ವಲಯದಲ್ಲಿ ಸಿಹಿ ಸಂತಸ ಭಾವ ಮೇಳೈಸಿದೆ !
ಈ ಮಹೋನ್ನತ ಹಬ್ಬಗಳ ಅಂಗವಾಗಿ ಕೆಎಂಎಫ್ ರಾಜ್ಯಾದ್ಯಂತ ಡಿ,19 ರಿಂದ ಜ,19 ರವರೆಗೆ ಶೇ.20 ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ತಿಂಡಿ ಉತ್ಸವ ಆರಂಭಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಿ ಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಆಲಮಟ್ಟಿಯ ರಾಕ್ ಉದ್ಯಾನದ ಬಳಿಯ ನಂದಿನಿ ಮಳಿಗೆಯಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಅರಳದಿನ್ನಿ ಚಂದ್ರಾದೇವಿ ಮಠದ ಚಂದ್ರಶೇಖರ ಧರ್ಮರ ಕಾರ್ಯಕ್ರಮ ಉದ್ಘಾಟಿಸಿ, ಕನಾ೯ಟಕ ಹಾಲು ಮಹಾಮಂಡಳದವರು ಕೈಗೊಂಡ ಈ ವಿಶೇಷ ಕಾರ್ಯ ಜನಹಿತವಾಗಿದೆ. ನಂದಿನಿ ಸಿಹಿ ಉತ್ಪನ್ನಗಳನ್ನು ಶುಚಿತ್ವದಿಂದ ತಯಾರಿಸಿ ಶೇ 20 ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದು ಶ್ಲಾಘನೀಯ.ಇದರಿಂದ ಇಲ್ಲಿನ ಗ್ರಾಹಕರಿಗೆ ಹಾಗು ದೂರದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಿದ್ದು ಸಂತಸ ಮೂಡಿಸಿದೆ ಎಂದರು.
‌ಕೆಎಂಎಫ್ ನ ಉಪ ವ್ಯವಸ್ಥಾಪಕ ಎಲ್.ಬಿ.ಸಿಂಗ್, ನಂದಿನಿ ಮಳಿಗೆಯಲ್ಲಿನ ಎಲ್ಲ ಉತ್ಪನ್ನಗಳು ಉತ್ತಮ ಗುಣಮಟ್ಟದ ಉತ್ಪನ್ನಗಳಾಗಿವೆ. ರಾಸಾಯನಿಕ ವಸ್ತುಗಳನ್ನು ಬಳಸದೇ ಪರಿಶುದ್ಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಹೊಸ ವರ್ಷ, ಸಂಕ್ರಾಂತಿ ನಿಮಿತ್ಯ ಒಂದು ತಿಂಗಳ ಕಾಲ ಈ ರಿಯಾಯಿತಿ ದರ ಮಳಿಗೆಯಲ್ಲಿ ಲಭ್ಯವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶುದ್ಧವಾದ ಉತ್ಪನ್ನಗಳ ಬಳಕೆಯಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದರು.
ನಂದಿನಿ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಳೆದ ಹಲ ವರ್ಷದಿಂದ ಕೆಎಂಎಫ್ ರಾಜ್ಯಾದ್ಯಂತ ಈ ರೀತಿಯ ಸಿಹಿ ಉತ್ಸವ ಯೋಜನೆ ರೂಪಿಸಿಕೊಂಡು ಎಲ್ಲಾ ರೀತಿಯ ನಂದಿನಿ ಸ್ವೀಟ್ಸ್ ಉತ್ಪನ್ನಗೊಳ್ಳುವ ಪದಾರ್ಥಗಳ ಮಾರಾಟ ದರದ ಮೇಲೆ ಶೇ. 20 ರಷ್ಟು ರಿಯಾಯಿತಿ ನೀಡುತ್ತಾ ಬಂದಿದೆ. ಗ್ರಾಹಕರು ಇದಕ್ಕೆ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆ ವ್ಯಕ್ತಪಡಿಸಿ ಸ್ಪಂದಿಸುತ್ತಿದ್ದಾರೆ ಎಂದರು.
ಹೇಮಂತ ಬಂಕಾಪುರ, ಜಬ್ಬಾರ್ ಜಾಲಿಗಿಡದ,ಪ್ರವೀಣ ವಾಲಿಕಾರ, ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಹಂಡರಗಲ್ಲ, ಮಲ್ಲೇಶಿ ರಾಠೋಡ, ಬಸವರಾಜ ಹೆರಕಲ್ಲ, ಕನಾ೯ಟಕ ಮುಸ್ಲಿಂ ಕೌನ್ಸಿಲ್ ಅಧ್ಯಕ್ಷ ಸಲೀಂ ಮುಲ್ಲಾ, ಬಾಬು ಲಮಾಣಿ, ಯರಗೂರದಪ್ಪ ತುಬಾಕೆ, ಶಾಂತಪ್ಪ ಹೆರಕಲ್ಲ,ಮೀರಾಸಾಬ್ ಬಂಡಿವಡ್ಡರ ಇತರರಿದ್ದರು.
ಪೋಟೋ : ಆಲಮಟ್ಟಿಯ ರಾಕ್ ಉದ್ಯಾನದ ಬಳಿಯ ನಂದಿನಿ ಮಳಿಗೆಯಲ್ಲಿ ನಂದಿನಿ ಸಿಹಿ ಉತ್ಸವವನ್ನು ಅರಳದಿನ್ನಿ ಚಂದ್ರಾದೇವಿ ಮಠದ ಚಂದ್ರಶೇಖರ ಧರ್ಮರ ಉದ್ಘಾಟಿಸಿದರು.

Exit mobile version