ಶಿಕ್ಷಕ ಶಾಂತಕುಮಾರ ಭಜಂತ್ರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಗದಗ: ತಾಲೂಕಿನ ಲಿಂಗಧಾಳ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರು ಹಾಗೂ ಕನ್ನಡ ಜಾನಪದ ಪರಿಷತ್ ಗದಗ ಜಿಲ್ಲಾಧ್ಯಕ್ಷರಾದ ಶಾಂತಕುಮಾರ ಬಸಪ್ಪ ಭಜಂತ್ರಿ ಅವರಿಗೆ ಡಾ ಪಂಡಿತ್ ಪುಟ್ಟರಾಜ ಸೇವಾ ಸಮಿತಿ, ನವದೆಹಲಿ ಮತ್ತು ಚೇತನ ಪೌಂಡೇಶನ್ ಕರ್ನಾಟಕ ಇವುಗಳ ಆಶ್ರಯದಲ್ಲಿ ನಡೆದ,”ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಗೀತಗಾಯನ, ಕವಿಗೋಷ್ಠಿ, ಕರುನಾಡ ಚೇತನ ಪ್ರಶಸ್ತಿ ಮತ್ತು”ಭಾರತ ಸೇವಾ ರತ್ನ”ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ ೧೩ರಂದು ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾಂಗಣದಲ್ಲಿ ಜರುಗಿತು.

ಶಿಕ್ಷಕ ಶಾಂತಕುಮಾರ ಭಜಂತ್ರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ ೧೩ರಂದು ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ ನ ಕುವೆಂಪು ಸಭಾಂಗಣದಲ್ಲಿ ಜರುಗಿತು

ಸಮಾರಂಭದಲ್ಲಿ ಡಾ.ಸತೀಶಕುಮಾರ ಹೊಸಮನಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು, ಶ್ರೀಮತಿ ರೇಣುಕಾ ಶಿಕಾರಿ, ಚಿತ್ರ ನಟಿಯರು,ರಾಜ್ಯಾಧ್ಯಕ್ಷರು,ನಾಡಪ್ರೇಮಿ ಕಲಾವಿದರು ಬಳಗ ಬೆಂಗಳೂರು, ಹಿರಿಯ ಚಿತ್ರನಟ ಗಣೇಶ ರಾವ್ ಕೇಸರಕರ, ಚೇತನ ಪೌಂಡೇಶನ್ ಕರ್ನಾಟಕದ ಅಧ್ಯಕ್ಷ ಡಾ.ಚಂದ್ರಶೇಖರ ಮಾಡಲಗೇರಿ,ಇನ್ನೂ ಮುಂತಾದವರ ಸಮ್ಮುಖದಲ್ಲಿ ಡಾ.ಶಾಂತಕುಮಾರ ಬಸಪ್ಪ ಭಜಂತ್ರಿಯವರಿಗೆ “ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದ “ಸೇವೆಯನ್ನು ಪರಿಗಣಿಸಿ” ಭಾರತ ಸೇವಾ ರತ್ನ ‘ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

Exit mobile version