ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ

ಉತ್ತರಪ್ರಭ ಸುದ್ದಿ
ಗದಗ:
ಕನ್ನಡ ಜಾನಪದ ಪರಿಷತ ಬೆಂಗಳೂರು ಜಿಲ್ಲಾ ಘಟಕ ಗದಗ ಇವರ ಆಶ್ರಯದಲ್ಲಿ ನವೆಂಬರ 17 ರಂದು ಸಾಯಂಕಾಲ 5-30 ಗಂಟೆಗೆ ಗದಗ ನಗರದ ಬಣ್ಣದ ಮನೆ ಆರ್ಟ ಅಡ್ಡಾದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ, ವಿಶೇಷ ಉಪನ್ಯಾಸ, ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಪ. ಪೂ. ಶ್ರೀ ಕಲ್ಲಯ್ಯ್ಜ್ಜನವರು ಪೀಠಾಧಿಪತಿಗಳು ಶ್ರೀ ವಿರೇಶ್ವರ ಪುಣ್ಯಾಶ್ರಮ ಗದಗ ಇವರು ವಹಿಸುವರು.

ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಬೆಳಗಾವಿ ವಿಭಾಗೀಯ ಸಂಚಾಲಕರಾದ ಪ್ರೊ. ವ್ಹಿ. ಎಸ್. ಕೌಜಲಗಿ ಉದ್ಘಾಟಿಸುವರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ವಿಶ್ವನಾಥ ಜಿ. ಮುಖ್ಯಸ್ಥರು ಕನ್ನಡ ವಿಭಾಗ ಜೆ. ಟಿ. ಮಹಾವಿದ್ಯಾಲಯ ಗದಗ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಕಿರೇಸೂರ, ಕ.ಜಾ.ಪ. ಘಟಕದ ಅಧ್ಯಕ್ಷರಾದ ಸಿ. ಬಿ. ಮಾಳಗಿ, ಸಂಗಮೇಶ ಹಾದಿಮನಿ, ಎಂ. ಕೆ. ಬೇವಿನಮರದ, ಈಶ್ವರ ಕುರಿ, ಮುಂತಾದವರು ಭಾಗವಹಿಸಲಿದ್ದಾರೆ.

“ಕನ್ನಡ ಸಾಹಿತ್ಯಕ್ಕೆ ಗದಗ ಜಿಲ್ಲೆಯ ಕೊಡುಗೆ” ಎಂಬ ವಿಶೇಷ ಉಪನ್ಯಾಸವನ್ನು ಪ್ರೊ. ಸಿದ್ದಲಿಂಗೇಶ್ವರ ಸಜ್ಜನಶೆಟ್ಟರ್ ಕನ್ನಡ ಸಹಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಗದಗ ಅವರು ನೀಡುವರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ವಿರೇಶ್ವರ ಪುಣ್ಯಾಶ್ರಮದ ಡಾ. ಪ. ಪೂ. ಶ್ರೀ ಕಲ್ಲಯ್ಯಜ್ಜನವರು, ರಂಗಭೂಮಿ ಕಲಾವಿದೆ ಶ್ರೀಮತಿ ಸಾವಿತ್ರಿ ಗೌಡರ, ಜಾನಪದ ಕಲಾವಿದರಾದ ಶಿವಪುತ್ರಪ್ಪ ಷಣ್ಮಖಪ್ಪ ಚಿಕ್ಕನರಗುಂದ, ಜಾನಪದ ನೃತ್ಯ ಕಲಾವಿದರು ಹಿರೇಮಣ್ಣೂರು, ಸಣ್ಣಪ್ಪ ಈಶ್ವರಪ್ಪ ಧರಣಿ, ಗೀ ಗೀ ಪದ ಕಲಾವಿದರು ಜಂತ್ಲಿ ಶಿರೂರ, ಶ್ರೀಮತಿ ಶಿಲ್ಪಾ ಕುರಹಟ್ಟಿ ಗಾಯಕರು ಗದಗ ಇವರುಗಳನ್ನು ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವುದು. ಕನ್ನಡ ಗೀತ ಗಾಯನವನ್ನು ಜಾನಪದ ಕಲಾವಿದರಾದ ಗೌಡಪ್ಪ ಬಮ್ಮಪ್ಪನವರ ಹಾಗೂ ಬಸವರಾಜ ಈರಣ್ಣವರ, ತಂಡದವರಿoದ ಜರುಗಲಿದೆ ಎಂದು ಕ.ಜಾಪ. ಕಾರ್ಯದರ್ಶಿ ಪ್ರೊ. ಎನ್ ಎನ್ ಕಿಂದ್ರಿ ಮತ್ತು ಪತ್ರಿಕಾ ಕಾರ್ಯದರ್ಶಿ ಪ್ರೊ. ನಿಂಗಪ್ಪ ಟಿ. ಪೂಜಾರ, ಪತ್ರಿಕಾ ಪ್ರಕಟಣೆಯ ತಿಳಿಸಿದ್ದಾರೆ.

Exit mobile version