ಮಳೆ ಬಂದರೆ ಸಾಕು ಹಾಸ್ಟೆಲ್ ತುಂಬ ನೀರು; ಪರದಾಡುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳು..!

ಪಿಪಿಡಿ ಹಾಸ್ಟೆಲ್ ಬೆಟಗೇರಿ-೨

ಉತ್ತರಪ್ರಭ
ಗದಗ:
ನಿನ್ನೆ ರಾತ್ತಿಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನ ಹತ್ತಿರವಿರುವ ಪೋಸ್ಟ್ ಮೆಟ್ರಿಕ್ ಬಾಯ್ಸ್ ಹಾಸ್ಟೆಲ್ ಬೆಟಗೇರಿ ನಂ. 2ರಲ್ಲಿ ಹಾಸ್ಟೆಲ್ ಒಳಗೆ ನುಗ್ಗಿದ ಮಳೆಯ ನೀರಿನಿಂದಾಗಿ ರಾತ್ರಿಯಿಡಿ ವಿದ್ಯಾರ್ಥಿಗಳು ಮಲಗದೆ ಪರದಾಡಿದ ಘಟನೆ ನಡೆದಿದೆ.

ಹಾಸ್ಟೆಲಿನ ಡೈನಿಂಗ್ ಹಾಲ್ ನಲ್ಲಿ ನುಗ್ಗಿರುವ ನೀರು

ಎಷ್ಟೊ ಬಾರಿ ಮೆಲಧಿಕಾರಿಗಳಿಗೆ ವಿಧ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನ ತಿಳಿಸಿದರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಸಿಗದಿರುವದು ಕಾರಣವೆಂದು ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ವಾಸ ಮಾಡುವ ರೂಮಿನಲ್ಲಿ ನುಗ್ಗಿರುವ ನೀರು

ಈ ಕುರಿತು ಹಾಸ್ಟೆಲ್ ವಾರ್ಡನ್ ರೊಂದಿಗೆ ಮಾತನಾಡಿದಾಗ ನಾನು ಕೆಲಸದ ಮೆಲೆ ಬೆಂಗಳೂರಿಗೆ ತೆರಳಿದ್ದು ಇಗತಾನೆ ಆಗಮಿಸಿದ್ದು ಸ್ವಚ್ಚ ಗೊಳಿಸಲು ಕ್ರಮ ಕೈಗೊಳ್ಳುತ್ತೆನೆ ಅಲ್ಲದೆ ಈ ಸಮಸ್ಯೆಯ ಕುರಿತು ಮೆಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಹಾಸ್ಟೆಲ್ ಡ್ರೈನೆಜ್ನಲ್ಲಿ ನೀರು ನುಗ್ಗಿ ಡ್ರೈನೆಜ್ ನೀರು ಹಾಸ್ಟೆಲ್ ನಲ್ಲಿ ಬರುತ್ತಿರುವ ದೃಶ್ಯ

ಈಗಲಾದರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ನೋಡಿ ಕೊಳ್ಳಬೇಕಾಗಿದೆ.

Exit mobile version