ಗದಗ ಜಿಲ್ಲೆಯಲ್ಲಿಂದು ಪತ್ತೆಯಾದ ಸೋಂಕಿತರ ವಿವರ

corona covid19 lokdown

ಗದಗ ಜಿಲ್ಲೆಯಲ್ಲಿಂದು 116 ಕೊರೊನಾ ಪಾಸಿಟಿವ್!

ಗದಗ: ಇಲ್ಲಿನ ನಗರ ಸಭೆ ವ್ಯಾಪ್ತಿಯ ಹೆಲ್ಥ್ ಕ್ಯಾಂಪ್, ಕನ್ಯಾಳ ಅಗಸಿ, ಸಾಯಿಬಾಬಾ ದೇವಸ್ಥಾನ ಹತ್ತಿರ, ಹುಡ್ಕೋ ಕಾಲೋನಿಯ ಚಿದಾನಂದ ಮಠ ಹತ್ತಿರ, ಶಿದ್ದಲಿಂಗನಗರ, ಜಿಮ್ಸ್ ಆಸ್ಪತ್ರೆ, ಜವಳ ಗಲ್ಲಿ, ಕಳಸಾಪೂರ ರಸ್ತೆ, ಸಾಯಿ ನಗರ 2ನೇ ಕ್ರಾಸ್, ಬಾಲಕಿಯರ ಜಿಮ್ಸ್ ಹಾಸ್ಟೆಲ್, ಎಸ್.ಎಸ್.ಬಿ ಕಾಲೋನಿ, ಹುಡ್ಕೋ ಕಾಲೋನಿ, ಹಾತಲಗೇರಿ ನಗರ, ಕೆಸಿ ರಾಣಿ ರಸ್ತೆ, ಗಂಗಿ ಮಡಿ, ರಂಗನವಾಡಿ, ಕಾಗದಗೇರಿ ಓಣಿ, ತುಳಜಾ ಭವಾನಿ ದೇವಸ್ಥಾನ ಹತ್ತಿರ, ಕಿಲ್ಲಾ ಓಣಿ, ಗದಗ ತಾಲೂಕಿನ ಸೂಡಿ, ಕಳಸಾಪೂರದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಮುಂಡರಗಿ ಪಟ್ಟಣದ ಕಡ್ಲಿ ಪೇಟೆ, ವಿವೇಕಾನಂದ ನಗರ, ಮುಂಡರಗಿ ತಾಲೂಕಿನ ಡೋಣಿ, ಜಾಲವಾಡಿಗಿ, ಕೊರ್ಲಹಳ್ಳಿ, ಗಜೇಂದ್ರಗಡ ತಾಲ್ಲೂಕಿನ ರಾಜೂರ, ಗಜೇಂದ್ರಗಡ ಪಟ್ಟಣದ ಬಸವೇಶ್ವರ ನಗರದಲ್ಲಿ ಸೋಂಕಿತರು ದೃಢಪಟ್ಟಿದ್ದಾರೆ.

ರೋಣ ತಾಲೂಕಿನ ಬೇವಿನಕಟ್ಟಿ, ಬೆಳವಣಿಕೆ, ಲಕ್ಷ್ಮೇಶ್ವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಹತ್ತಿರ, ಅಸ್ರಾ ಓಣಿ, ನರಗುಂದ ಪಟ್ಟಣದ ವಿನಾಯಕ ನಗರ, ವಿವೇಕಾನಂದ ನಗರ, ನರಗುಂದ ತಾಲೂಕಿನ ಚಿಕ್ಕನರಗುಂದ, ಶಿರಹಟ್ಟಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.  

ಮೃತರ ವಿವರ
ಮುಂಡರಗಿ ತಾಲ್ಲೂಕು ಡೋಣಿ ಗ್ರಾಮ  ನಿವಾಸಿ 65 ವರ್ಷದ ಮಹಿಳೆ ಪಿ-52033 ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಜಿಮ್ಸ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 16 ರಂದು ಇವರಿಗೆ ಕೋವಿಡ್-19 ದೃಢಪಟ್ಟಿರುತ್ತದೆ.  ದಿ. 25 ರಂದು ಪಾಶ್ರ್ವವಾಯು ಹಾಗೂ ನಿಮೋನಿಯಾದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿರುತ್ತದೆ.
ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

Exit mobile version