ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಶಾಲೆಯ ಸಿ.ಬಿ.ಎಸ್.ಇ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ: ಸ್ಥಳೀಯ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾ ಪೀಠದ ಸಿ.ಬಿ.ಎಸ್.ಇ. ಶಾಲೆಗೆ ೨೦೨೧-೨೨ನೇ ಸಾಲಿನ ಸಿ.ಬಿ.ಎಸ್.ಇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಲಭಿಸಿದೆ. ಫಲಿತಾಂಶ ಪ್ರಕಟಗೊಂಡಿದ್ದು,ಪರೀಕ್ಷೆಗೆ ಹಾಜರಾದ ಒಟ್ಟು ೬೯ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶಾಲೆಯ,ಸಂಸ್ಥೆಯ ಕೀತಿ೯ ಹೆಚ್ಚಿಸಿದ್ದಾರೆ. ಈ ವರ್ಷವೂ ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿದ್ದು ವಿಶೇಷವಾಗಿದೆ. ವಿದ್ಯಾರ್ಥಿಗಳಾದ ಕುಮಾರ ಚಿನ್ಮಯಸ್ವಾಮಿ ಆರ್ ಹಿರೇಮಠ್ (ಶೇ ೯೧.೪)ಪ್ರಥಮ ಸ್ಥಾನ, ಕುಮಾರ ಸುಜಲ್ ಆರ್ ಖಟವಟೆ (ಶೇ ೯೦.೦೦) ದ್ವಿತೀಯ ಸ್ಥಾನ, ಕುಮಾರಿ ಸಹನಾ ಡಿ ಯಾದವ (ಶೇ ೮೭.೦೨) ಕುಮಾರಿ ಸುಪ್ರಿತಾ ಆರ್ ಪಾನಗಂಟಿ(ಶೇ ೮೭.೦೨) ತೃತೀಯ ಸ್ಥಾನ ಗಳಿಸಿದ್ದಾರೆ.ಜೊತೆಗೆ ದಿಯಾ ಬಾಕಳೆ(ಶೇ ೮೬.೮), ಶಾಹಿನ್ ನದಾಫ್(ಶೇ ೮೬.೪), ರಾಹುಲ್ ಹೊಸಮನಿ(ಶೇ ೮೫.೮), ನಿಖೀಲ್ ಮಾನ್ವಿ(೮೫.೪), ಅಮೋಘ ವಾಲಿ (ಶೇ ೮೪.೬), ಪಲ್ಲವಿ ಧರ್ಮಾಯತ್ (ಶೇ ೮೪.೬) , ಪ್ರೀತಿ ಗೊರೋಜಿ (ಶೇ ೮೪.೪) ಈ ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಜೊತೆಗೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು ೬೯ ವಿದ್ಯಾರ್ಥಿಗಳಲ್ಲಿ ೨೬ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೪೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ , ೦೧ ವಿದ್ಯಾರ್ಥಿ ದ್ವಿತೀಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.ಪರೀಕ್ಷೆಯಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಪಟ್ಟಣಶೆಟ್ಟಿ, ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲೆಯ ಶೈಕ್ಷಣಿಕ ಸಲಹಾ ಆಡಳಿತಾಧಿಕಾರಿಗಳಾದ ಶ್ರೀ ಮಂಜುನಾಥ್ ಕಂಡಕಿ, ಪ್ರಾಚಾರ್ಯರಾದ ಶ್ರೀಮತಿ ಜ್ಯೋತಿ ನಾಯಕ್, ಉಪ ಪ್ರಾಚಾರ್ಯರಾದ ಶ್ರೀಮತಿ ಶುಭಾಂಗಿನಿ ಹಿರೇಮಠ, ಶಾಲೆಯ ಸರ್ವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Exit mobile version