ರಾಜ್ಯದಲ್ಲಿ 18 ಭ್ರಷ್ಟರ ಬೇಟೆಯಾಡಿದ ಎಸಿಬಿ: ಗದುಗಿನ ಬಸವಕುಮಾರ್ ಅಣ್ಣಿಗೇರಿಗೆ ಬಿಗ್ ಶಾಕ್

ಉತ್ತರಪ್ರಭ
ರಾಜ್ಯ: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ ಮನೆಗಳು ಹಾಗೂ ಕಛೇರಿಯ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದೆ.

ಇಂದು ಬೆಳಗ್ಗೆಯೇ ಕಾರ್ಯಾಚರಣೆಗೆ ಇಳಿದಿರುವ ಎಸಿಬಿ ಅಧಿಕಾರಿಗಳು ರಾಜ್ಯದಲ್ಲಿ 18 ಮಂದಿ ಅವರುಗಳು

  1. ಗದುಗಿನ ಬಸವಕುಮಾರ್, (ಶಿರಸ್ತೆದಾರ್) ಅಣ್ಣಿಗೇರಿ,
  2. ಗಜೇಂದ್ರ ಕುಮಾರ್ , (ಅಡಿಷನಲ್ ಡೈರೆಕ್ಟರ್) ಸಾರಿಗೆ ಇಲಾಖೆ,
  3. ಶಿವಾನಂದ ಪಿ. ಶರಣಪ್ಪ (ರೆಂಜ್ ಫಾರೇಸ್ಟ ಆಫೀಸರ್) ಬಾದಾಮಿ,
  4. ರಮೇಶ್ ಕನಕಟ್ಟೆ, (ರೆಂಜ್ ಫಾರೇಸ್ಟ ಆಫೀಸರ್) ಯಾದಗಿರಿ,
  5. ಗೋಪಿನಾಥ್ ಮಾಳಗಿ, (ನಿರ್ಮಿತಿ ಕೇಂದ್ರ) ವಿಜಯಪುರ,
  6. ಶ್ರೀನಿವಾಸ್, (ಜನರಲ್ ಮ್ಯಾನೇಜರ್) ಸಮಾಜ ಕಲ್ಯಾಣ ಇಲಾಖೆ,
  7. ಕೃಷ್ಣನ್, (ಸಹಾಯಕ ಇಂಜಿನಿಯರ್) ಎಪಿಎಂಸಿ ಹಾವೇರಿ,
  8. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ,
  9. ಗಿರೀಶ್, (ಸಹಾಯಕ ಇಂಜಿನಿಯರ್) ರಾಷ್ಟ್ರೀಯ ಹೆದ್ದಾರಿ,
  10. ರಾಕೇಶ್ ಕುಮಾರ್, (ಟೌನ್ ಪ್ಲಾನಿಂಗ್) ಬಿಡಿಎ,
  11. ಬಸವರಾಜ ಶೇಖರ್ ರೆಡ್ಡಿ (ಇಂಜಿನಿಯರ್) ಗೋಕಾಕ್,
  12. ಕೆ.ಬಿ. ಶಿವಕುಮಾರ್, (ಅಡಿಷನಲ್ ಡೈರೆಕ್ಟರ್) ಕಾಮರ್ಸ್ ಅಂಡ್ ಇಂಡಸ್ಟ್ರೀಸ್,
  13. ಮಂಜುನಾಥ್ (ಅಸಿಸ್ಟೆಂಟ್ ಕಮೀಷನರ್) ರಾಮನಗರ,
  14. ಚಲುವರಾಜ್ (ಅಬಕಾರಿ ನಿರೀಕ್ಷಕರು) ಗುಂಡ್ಲುಪೇಟೆ,
  15. ಗವಿ ರಂಗಪ್ಪ, (ಸಹಾಯಕ ಇಂಜಿನಿಯರ್) ಲೋಕೋಪಯೋಗಿ ಇಲಾಖೆ,
  16. ಬಾಲಕೃಷ್ಣ (ವಿಜಯನಗರ ಪೊಲೀಸ್ ಠಾಣೆ) ಮೈಸೂರು,
  17. ಅಶೋಕ ರೆಡ್ಡಿ ಪಾಟೀಲ (ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್) ಕೃಷ್ಣ ಜಲ ಭಾಗ್ಯ ನಿಗಮ, ರಾಯಚೂರು,
  18. ದಯಾ ಸುಂದರ ರಾಜು (ಸಹಾಯಕ ಇಂಜಿನಿಯರ್) ಕರ್ನಾಟಕ ವಿದ್ಯುತ್ ಸರಬರಾಜು, ದಕ್ಷಿಣ ಕನ್ನಡ,

ಈ ಮೇಲಿನ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯು 100 ಅಧಿಕಾರಿಗಳು ಮತ್ತು 300 ಮಂದಿ ಸಿಬ್ಬಂದಿಗಳಿಂದ ಕೂಡಿದ್ದು ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ.

Exit mobile version