ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಪ್ಪತಗುಡ್ಡಕ್ಕೆ ಬೆಂಕಿ: ಗಿಡ ಮರಗಳು ಸುಟ್ಟು ಭಸ್ಮ


ಉತ್ತರಪ್ರಭ ಸುದ್ದಿ
ಗದಗ:
ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಅರಣ್ಯ ತಡೆಯಲು ವಿಫಲವಾಗಿದೆ, ಅರಣ್ಯ ಇಲಾಖೆಯ ಅಧಿಕಾರಿಗಳೆ ಬೆಂಕಿ ಹಚ್ಚಿ ಅವರಿವರ ಮೇಲೆ ದೂಶಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ದಿನಾಂಕ: 26.02.2022 ರಂದು ಡಂಬಳ ವ್ಯಾಪ್ತಿಯಲ್ಲಿ ಬೆಂಕಿ ಹತ್ತಿ ಸಾಕಷ್ಟು ಅರಣ್ಯ ನಾಶವಾಗಿದೆ. ಅದು ಅಚಾನಕ ಆಗಿದೆ ಎಂದು ಮುಂಡರಗಿಯ ವಲಯ ಅರಣ್ಯ ಅಧಿಕಾರಿಗಳು ಸ್ಪಷ್ಟನೇ ನೀಡುತ್ತಾರೆ, ಆದರೇ ಈ ಅಧಿಕಾರಿ ಅರಣ್ಯ ಉಳಿಸುತ್ತಿದ್ದೇನೆ ಎಂದು ಬ್ರಮೇಯಲ್ಲಿಯೇ, ಇದ್ದಾರೆ ಹೊರತು ಬೆಂಕಿಯಿAದ ಸುಟ್ಟ ಅರಣ್ಯವನ್ನು ತರಲಿಕ್ಕೆ ಆಗತ್ತಾ ಇವರಿಗೆ ಸಂಬಳ ನೀಡುವುದು ಇದಕ್ಕೆನಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.


ಇಂದು ಗದಗ ತಾಲೂಕಿನ ನಾಗಾವಿ ಗುಡ್ಡ ಬೆಂಕಿಯಿAದ ಹೊತ್ತಿ ಉರಿದು ಹೊಗಿದೆ , ಅರಣ್ಯ ಇಲಾಖೆಯ ಅಧಿಕಾರಿಗಳ ಅಸಡ್ಡೆ ಎನ್ನಬೇಕೆ? ಅಥವಾ ಅರಣ್ಯ ರಕ್ಷಕರ ಹೆಸರಿನಲ್ಲಿ ರಕ್ಷಣೆಯೇ ಮರೆತರಾ ಈ ಎಲ್ಲಾ ಘಟನೆಗಳು ಜನರಲ್ಲಿ ವಿಚಾರಮಾಡಲು ಎಡೆಮಾಡಿಕೊಟ್ಟದಂತು ನಿಜ. ನಾಗಾವಿಯಿಂದ ಹಿಡಿದು ಜಲಶಂಕರದವರೆಗೂ ಸುಟ್ಟು ಹೋಗಿದೆ. ಇದರ ಹೊಣೆಯನ್ನು ಹೊರುವವರು ಯಾರು? ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಸಾಕ್ಷಿ ಎನ್ನುವಂತಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕನೂನು ಕ್ರಮ ಜರುಗಿಸಬೇಕಾಗಿದೆ.

Exit mobile version