ಮರಗಳಿಗೆ ಕತ್ತರಿ: ಅರಣ್ಯಾಧಿಕಾರಿಗಳ ಅಮಾನತು

ಬೆಂಗಳೂರು: ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಲ್ಲಿ ಕಾಡುಗಳ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅರಣ್ಯ ಇಲಾಖೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತುಗೊಂಡ ಅಧಿಕಾರಿಗಳನ್ನು ಚಿಕ್ಕಮಗಳೂರು ವಿಭಾಗದ ಪ್ರಭಾರ ಸರ್ವೆ ರೇಂಜರ್ ದಿನೇಶ್, ಫಾರೆಸ್ಟರ್‌ಗಳಾದ ಮಧುಸೂದನ್, ಶಿವರಾಜ ನಾಯಕ್, ಮೂಡಿಗೆರೆ ಉಪವಿಭಾಗದ ಅರಣ್ಯ ರಕ್ಷಕ ಸುರೇಶ್, ಕೊಪ್ಪ ವಿಭಾಗದ ಸೆಕ್ಷನ್ ಫಾರೆಸ್ಟರ್ ಯಾಸಿನ್ ಬಾಷಾ, ಅರಣ್ಯ ರಕ್ಷಕ ನವೀನ್‌ಕುಮಾರ್, ಸರ್ವೆ ಫಾರೆಸ್ಟರ್ ಅರುಣ್‌ಕುಮಾರ್ ಬಾರಂಗಿ ಎಂದು ಹೇಳಲಾಗುತ್ತಿದೆ.

ಪ್ರಕರಣದ ನಿಷ್ಪಕ್ಷಪಾತ ತನಿಖೆ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯಲು ಅನುಮತಿ ನೀಡುವಲ್ಲಿ ಈ ಅಧಿಕಾರಿಗಳು ಭಾಗಿಯಾಗಿದ್ದಾರೆ. ಖಾಸಗಿ ಭೂಮಿಯಲ್ಲಿಯೂ ಮರ ಕಡಿಯಲು ಮಾಫಿಪಾಸ್ ಕೇಳಿದ್ದಾರೆ. ಬಾಲೂರು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version