ಜಿಲ್ಲಾ ನ್ಯಾಯಾದೀಶನ ವಜಾಕ್ಕೆ ಒತ್ತಾಯಿಸಿ ಫೆ.1ರಂದು ಬಂಜಾರ ಸಮಾಜದಿಂದ ಪ್ರತಿಭಟನೆ

ವರದಿ: ವಿಠಲ ಕೆಳೂತ್


ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿ, ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ಮುಖ್ಯ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಒತ್ತಾಯಿಸಿ ಇಲ್ಲಿನ ಬಂಜಾರ ಸಮಾಜದ ಮುಖಂಡರ ವತಿಯಿಂದ ಫೆ.1ರಂದು ಮಸ್ಕಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಐಬಿಎಸ್ ಎಸ್ ತಾಲೂಕ ಅಧ್ಯಕ್ಷ ಅಮರೇಶ ಅಂತರಗಂಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
73ನೇ ಗಣರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮದಲ್ಲಿ‌ ಡಾ.‌ಬಿ.ಆರ್ ಅಂಬೇಡ್ಕರ್ ಅವರ ಪೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ‌ ಎಂದು ಹೇಳಿ, ತಾವೇ ಸ್ವತಃ ಅಂಬೇಡ್ಕರ್ ಪೋಟೋ ತಗೆದಿಟ್ಟು ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ನ್ಯಾಯಾದೀಶನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.


ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕೆಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ನ್ಯಾಯಾದೀಶನಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಅರಿವು ಇಲ್ಲವೇ ಅಸ್ಪೃಶ್ಯತೆ ಬಗ್ಗೆ ಕೀಳುj ಮನೋಭಾವನೆ ಹೊಂದಿರುವ ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನಗೌಡನ ಮೇಲೆ‌ ದೇಶ ದ್ರೋಹ ಪ್ರಕರಣವನ್ನು ದಾಖಲೀಸಬೇಕು. ಈ ಕೂಡಲೇ ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಮಸ್ಕಿಯ ಹಳೇ ಬಸ್ ನಿಲ್ದಾಣದ ಹತ್ತಿರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಾಗುವುದು ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಮಾಜದ ಹಿರಿಯ ಮುಖಂಡ ಭೀಮಶಪ್ಪ ಪೂಜಾರಿ, ಅಮರೇಶ ರಾಠೋಡ್, ಶ್ರೀನಿವಾಸ ಚವ್ಹಾಣ, ಅಮರೇಶ ಪವಾರ, ಮೀಠಪ್ಪ ರಾಠೋಡ್ ಸೇರಿದಂತೆ ಇನ್ನಿತರಿದ್ದರು.

Exit mobile version