ರಾಯಚೂರು ಜಿಲ್ಲಾ ನ್ಯಾಯಾದೀಶನ ಅಮಾನತ್ತಿಗೆ ಒತ್ತಾಯ

ವರದಿ: ವಿಠಲ ಕೆಳೂತ್


ಮಸ್ಕಿ:
ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.‌ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಗೊಳಿಸಿದ ರಾಯಚೂರಿನ ಜಿಲ್ಲಾ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.


ಪಟ್ಟಣದ ಅಶೋಕ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಎರಡು ಘಂಟೆಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು ಅಕ್ರೋಶ ಹೊರ ಹಾಕಿದರು.
ಈ ವೇಳೆ ದಲಿತ ದಾಹಿತಿ ದಾನಪ್ಪ ನಿಲೋಗಲ್ಲ ಅವರು ಮಾತನಾಡಿ, ಗಣರಾಜ್ಯೋತ್ಸವ ದ್ವಜಾರೋಹಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಇಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದ್ವಜಾರೋಹಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ನ್ಯಾಯಾದೀಶನ ವರ್ತನೆ ಖಂಡನೀಯ.
ಕಾನೂನು, ಸಂವಿಧಾನ ಪದವಿ ಪಡದುಕೊಂಡು ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿ ಕೊಡುವ ಒಬ್ಬ ಜಿಲ್ಲಾ ನ್ಯಾಯಾದೀಶನಿಗೆ ಸಂವಿಧಾನ, ಸಂವಿಧಾನ ಶಿಲ್ಪಿಯ ಬಗ್ಗೆ ಗೌರವ ಇಲ್ಲದಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಮನುವಾದಿಗಳ ಸಂಸ್ಕೃತಿ ಹೊಂದಿರುವ ಜಿಲ್ಲಾ ನ್ಯಾಯಾದೀಶನಿಗೆ ಈ ಕೂಡಲೇ
ಸೇವೆಯಿಂದ ಅಮಾನತ್ತುಗೊಳಿಸಿ ದೇಶ ದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಬಳಿಕ ತಹಶೀಲ್ದಾರ್ ಕವಿತಾ ಆರ್ ಮೂಲಕ ಮೂಲಕ ರಾಜ್ಯ ಸರಕಾರಕ್ಕೆ ಹಾಗೂ, ಉಚ್ಚ ನ್ಯಾಯಾಲಯ ನ್ಯಾಯದೀಶರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆ ಮುಖಂಡ ದೊಡ್ಡಪ್ಪ ಮುರಾರಿ, ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ, ಮೌನೇಶ ಮುರಾರಿ, ಹೆಚ್.ಬಿ ಮುರಾರಿ, ಅಬ್ದುಲ್ ಗನಿಸಾಬ, ನೀಲಕಂಠಪ್ಪ ಬಜೇಂತ್ರಿ, ದೊಡ್ಡ ಕರಿಯಪ್ಪ, ದುರ್ಗಾರಾಜ ವಟಗಲ್ಲ, ಸಂತೋಷ ಹಿರೇದಿನ್ನಿ, ಹಿರೇದಿನ್ನಿ, ಬಸವರಾಜ, ಅಶೋಕ ಮುರಾರಿ,

Exit mobile version