ವಿದ್ಯುತ್ ಅವಗಡ, ಕಬ್ಬಿನ ಹೊಲಕ್ಕೆ ಬೆಂಕಿ

ಉತ್ತರಪ್ರಭ ಸುದ್ದಿ
ಲಕ್ಷ್ಮೇಶ್ವರ:
ನಾಲ್ಕು ತಿಂಗಳಾದ್ಯಂತ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ ವಿದ್ಯುತ್ ಅವಘಡದಿಂದ ಸುಟ್ಟು ಕರಕಲಾದ ಘಟನೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆದರಹಳ್ಳಿ ಗ್ರಾಮದ ಶಂಕ್ರಪ್ಪ ಗಂಗಪ್ಪ ಲಮಾಣಿ ಸೇರಿದ್ದ ಜಮೀನಿನಲ್ಲಿ ಬೆಳೆಯಲಾದ 2.5 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಗೆ ವಿದ್ಯುತ್ ಅವಘಡದಿಂದ ಬೆಂಕಿ‌ ಬಿದ್ದ ಪರಿಣಾಮ ಕಬ್ಬು ಸುಟ್ಟು ಕರಕಲಾಗಿದೆ. ಪ್ರತಿ ಎಕರೆ 80 ಸಾವಿರ ರೂಪಾಯಿ ಖರ್ಚು ಮಾಡಿ 2.5 ಎಕರೆ ಪ್ರದೇಶದಲ್ಲಿ ಒಟ್ಟು 3,20,000 ವೆಚ್ಚದಲ್ಲಿ ಬೆಳೆಯಲಾದ ಪ್ರತಿ ಎಕರೆ ಪ್ರದೇಶಕ್ಕೆ 50ಟನ್ ಇಳುವರಿ ಮಟ್ಟಕ್ಕೆ ಬೆಳೆದಿತ್ತು. 3,70,000 ಮೌಲ್ಯ ಬೆಳೆ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಆಗೊಂದು ಈಗೊಂದು ಘಟನೆ ನಡೆದಾಗ ಹೋಗುವ ಅಗ್ನಿಶಾಮಕ ದಳದ ಸಿಬ್ಬಂದಿ ರೈತರು ಜಮೀನಿನಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಕಚೇರಿಗೆ ಕರೆ ಮಾಡಿದರೆ, ಅಗ್ನಿಶಾಮಕದಳದ ಸಿಬ್ಬಂದಿ ಅಲ್ಲಿಗೆ ಬಂದರೆ ಚಾರ್ಜ ಅಗುತ್ತೆ ಎಂದು ತಾಸುಗಂಟಲೆ ಕಾದರು ರೈತರ ಹೊಲಕ್ಕೆ ಬಿದ್ದಿರುವ ಬೆಂಕಿಯನ್ನು ನಿಂದಿಸಲು ತಡವಾಗಿ ಬಂದರು. ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರಿಗೆ ಕೇಳಿ ಇವರಿಗೆ ಕೇಳಿ ಎಂದು ಉಡಾಫೆ ಮಾತುಗಳು ಆಡುತ್ತಿರುವುದು ಇದರಿಂದ ಗ್ರಾಮದ ರೈತರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಕಬ್ಬಿನ ಹೊಲದಲ್ಲಿ ಕಬ್ಬು ಅಷ್ಟೆ ಅಲ್ಲದೇ, ನೀರಾವರಿಗೆ ಬಳಿಸಲಾದ ಪೈಪ್ ಗಳು, ಕೋಳಿ ಪಾರ್ಮ ಕೂಡ ಇದ್ದು ನಾಲ್ಕು ಪೈಪ್ ಸುಟ್ಟು ಹೋಗಿವೆ, ಕೋಳಿ ಪಾರ್ಮ ಕೂಡ ಅರ್ಧದಷ್ಟು ಸುಟ್ಟಿದೆ.

ಇದಕ್ಕೆ ಎಲ್ಲಾ ಕಾರಣ ಕೆ.ಇ.ಬಿ. ಇಲಾಖೆಯ ನೀರಲಕ್ಷ್ಯ ಎಂದು ಹೇಳುತ್ತಾರೆ

-ರೈತ ಶಂಕ್ರಪ್ಪ ಲಮಾಣಿ

ತುಂಬಾ ಸಾಲ ಮಾಡಿ ಕಬ್ಬು ಬೆಳೆದಿದ್ವಿ, ಅದರಲ್ಲಿ ನಮ್ಮ ಬೆಳೆಗಳು ಕಟಾವಿಗೆ ಬಂದಿತ್ತು ಗಂಗಾಪೂರ ಸುಗರ್ ಪ್ಯಾಕ್ಟರಿ ವಿಜಯಪುರ ಅವರಿಗೆ ಅಗ್ರಿಮೆಂಟ್ ಆಗಿತ್ತು ಅವರು ಇವತ್ತು ನಾಳೆ ಎಂದು ಕಟಾವು ಮಾಡಿತ್ತೆವೆ ಎಂದು ನಮಗೆ ಹೇಳುತ್ತಾ ಬಂದಿದ್ದಾರೆ ಕರೆ ಮಾಡಿದ್ರೆ ಸ್ವೀಕರಸಲ್ಲ ಅಷ್ಟರಲ್ಲಿ ಹೀಗೆ ಆಗಿದೆ ನಮಗೆ ಸರ್ಕಾರ ಪರಿಹಾರ ಒದಗಿಸಿಕೊಡಬೇಕು.

-ಶಂಕ್ರಪ್ಪ ಲಮಾಣಿ, ರೈತ.

Exit mobile version