ಗೋರ ಸೇನಾ ಸಂಘಟನೇ ವತಿಯಿಂದ ಪ್ರತಿಭಟನೆ- ಸಂಗೂರ ಸಕ್ಕರೆ ಕಾರ್ಖಾನೆ:ಲಾರಿ ಹಾಯ್ದು ಒರ್ವ ಕಾರ್ಮೀಕ ಸಾವೂ, ಇಬ್ಬರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿ

ಹಾವೇರಿ: ಹಾವೇರಿ ಜಿಲ್ಲೆಯ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ದಿನಾಂಕ:09.01.2022 ರಾತ್ರಿ 2.00 ಗಂಟೆ  ಸುಮಾರಿಗೆ ಹಿಂಬದಿಯಿಂದ ಲಾರಿ ಹರಿದು ಒರ್ವ ಕಾರ್ಮಿಕ  ಸೇರಿದಂತೆ ಮೂರು ಎತ್ತುಗಳು ಮೃತ ಪಟ್ಟು  ಹಲವರಿಗೆ ಗಾಯಗಳಾದ ಘಟನೆ ನಡೆದಿದೆ.

  ವಿಜಯನಗರ ಜಿಲ್ಲೆ ಕೊಟ್ಟೂರ ತಾಲೂಕ ದೂಪದಳ್ಳಿ ತಾಂಡಾದಿಂದ ಕಬ್ಬು ಕಟಾವು ಮಾಡಲಿಕ್ಕೆ ಹಾವೇರಿ ಜಿಲ್ಲೆಗೆ  ಅನೇಕ ಕಾರ್ಮಿಕರು ತಮ್ಮ ತುತ್ತಿನ ಚೀಲ ತಂಬಿಕೊಳ್ಳಲು  ದೂರದ  ಊರಿಂದ ಬಂದು  ಕೆಲಸವನ್ನು ಮಾಡುತ್ತಿದ್ದು. ದಿನಾಂಕ: 09.01.2022 ರ ರಾತ್ರಿ 2.00 ಗಂಟೆಯ ಸುಮಾರಿಗೆ ಕಾರ್ಮಿಕರು ಕಬ್ಬನ್ನು ಕಠಾವು ಮಾಡಿ ಅದನ್ನು ಸಂಗೂರ ಸಕ್ಕರೆ ಕಾರ್ಖಾನೆಗೆ ಸಾಗಿಸಿ ಮರಳುವ ಸಮಯದಲ್ಲಿ  ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಿಂದ ಬಂದ ಲಾರಿ ಒರ್ವ ಕಾರ್ಮಿಕ ಸೇರಿ ಮೂರು ಎತ್ತುಗಳು ಮೃತ ಪಟ್ಟಿವೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮೃತಪಟ್ಟ ಕಾರ್ಮಿಕ  ಮೂರ್ತಿ ನಾಯ್ಕ (45) ದೂಪದಳ್ಳಿ ತಾಂಡಾದ ನಿವಾಸಿಯಾಗಿದ್ದು , ಅವರಿಗೆ ಮೂವರು ಪುತ್ರಿಯರಿದ್ದಾರೆ. ಗಾಯಾಳುಗಾಳಾದ  ಅರ್ಜುನ ನಾಯ್ಕ ಮತ್ತು ಶೀನಾ ನಾಯ್ಕ ಇವರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗೋರ ಸೇನಾ ಸಂಘಟನೆ ಮತ್ತು ಮೃತರ ಸಂಬಂಧಿಕರು, ದೂಪದಳ್ಳಿ ತಾಂಡಾದ ಹಿರಿಯರು  ಸೇರಿದಂತೆ  ಘಟನೆ ಖಂಡಿಸಿ ಪ್ರತಿಭಟನೆಯನ್ನು ಮಾಡಿದರು.  ಈ ಮೂಲಕ ಆರೋಪಿಗಳಿಗೆ ಕಠೀಣ ಶೀಕ್ಷೆ ಮತ್ತು ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರಾದ ಅರುಣ ದಿಗಂಬರ್ ಚವ್ಹಾಣ, ಬಂಜಾರ ಜನಾಂಗ ಬೇರೆ ಬೇರೆ ಊರೂಗಳಿಂದ ವಲಸೆ ಬಂದು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಬಂಜಾರ ಜನಾಂಗದ ಸುರಕ್ಷತೆಯ ಬಗ್ಗೆ ಹಲವಾರು ಬಾರಿ  ಸರ್ಕಾರಕ್ಕೆ ಮನವಿ  ಮಾಡಿದರು, ಸರ್ಕಾರ ಸುರಕ್ಷತೆ ಬಗ್ಗೆ  ಗಮನ ವಹಿಸದ ಕಾರಣ  ಈ ಘಟನೆ ನಡೆದಿದೆ .ಈ ಕೂಡಲೇ ಸರ್ಕಾರ  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮೃತರ ಕುಟುಂಕ್ಕೆ ಪರಿಹಾರ ಮತ್ತು ಜನಾಂಗದ ವಲಸೆಯನ್ನು ತಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.

ಗೋರ ಸೇನಾ ರಾಜ್ಯಾಧಕ್ಷರಾದ ರವಿಕಾಂತ ಅಂಗಡಿ  ಘಟನೆಯನ್ನು ಖಂಡಿಸಿದ್ದು , ಪದೆ ಪದೆ ಇಂತಹ ಘಟನೆಗಳು ನಡೆಯುತ್ತಿದ್ದು , ವಲಸೆಯನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೋಳ್ಳದ ಕಾರಣ  ಜನಾಂಗಕ್ಕೆ ಅನ್ಯಾಯವಾಗಿದೆ,  ಕೂಡಲೇ ಸರ್ಕಾರ  ಮೃತರ ಕುಟುಂಕ್ಕೆ ಪರಿಹಾರ ಮತ್ತು ಜನಾಂಗದ ರಕ್ಷಣೆಗಾಗಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಗೋರಸೇನಾ ರಾಜ್ಯ ಸಂಯೋಜಕರಾದ ಯೋಗೇಶ ಸೇರಿದಂತೆ ಅನೇಕ ಕಾರ್ಯಕರ್ತರು, ದೂಪದಳ್ಳಿಯ ಪ್ರಕಾಶ ಮಹಾರಾಜರು ಮತ್ತು ಊರಿನ ಹಿರಿಯರು ಭಾಗವಹಿಸಿದ್ದರು.

ಸಂಗೂರ ವ್ಯಾಪ್ತಿ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಪ್ರಕರಣ ಕುರಿತು  ಪೋಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Exit mobile version