ಲಾರಿ ಬೈಕ್ ಅಪಘಾತ ವ್ಯಕ್ತಿ ಸಾವು ಅಪಘಾತಕ್ಕೆ ಪೋಲಿಸ್ ಪೆದೆ ಕಾರಣ, ಗ್ರಾಮಸ್ಥರ ಆರೋಪ

ಮುಳಗುಂದ : ಲಕ್ಷ್ಮೇಶ್ವರ ಕಡೆಯಿಂದ ಮುಳಗುಂದಕ್ಕೆ ಬರುತ್ತಿದ್ದ ಮರಳು ತುಂಬಿದ್ದ ಲಾರಿ ಹಿಂದಕ್ಕೆ ಚಲಿಸಿದ ಪರಿಣಾಮ ಬೈಕ ಸವಾರ ನೀಲಪ್ಪ ದೊಡ್ಡಗೌಡ್ರ(59) ಸ್ಥಳದಲ್ಲೆ ಮೃತಪಟ್ಟು, ಇನ್ನೂರ್ವನಿಗೆ ಗಂಭೀರ ಗಾಯವಾದ ಘಟನೆ ಸಮೀಪದ ದಾವಲ್ ಮಲ್ಲಿಕ್ ಗುಡ್ಡದ ಕ್ರಾಸ್ ಬಳಿ ಬುಧವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿ ಶೀತಾಲಹರಿ ಗ್ರಾಮದ ನಿವಾಸಿ ಪಪಂ ಮಾಜಿ ಸದಸ್ಯನಾಗಿದ್ದು, ಬೈಕ ಹಿಂಬದಿ ಸವಾರ ಮಾಗಡಿ ಗ್ರಾಮದ ರಾಜೇಸಾಬ ನದಾಫ್‍ನಿಗೆ ಗಂಭೀರ ಗಾಯವಾಗಿ ಜಿಮ್ಸ್ ಗೆ ದಾಖಲಿಸಲಾಗಿದೆ. ಈ ಕುರಿತು ಮುಳಗುಂದ ಪೋಲಿಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ

ಸವಾರ ನೀಲಪ್ಪ ದೊಡ್ಡಗೌಡ್ರ(59) ಸ್ಥಳದಲ್ಲೆ ಮೃತ ವ್ಯಕ್ತಿ

ಅಪಘಾತಕ್ಕೆ ಪೋಲಿಸ್ ಪೆದೆ ಕಾರಣ, ಗ್ರಾಮಸ್ಥರ ಆರೋಪ
ಲಾರಿ ಬೈಕ್ ಅಪಘಾತಕ್ಕೆ ಸಂಬಂಧಿಸಿದಂತೆ ದಾವಲಮಲ್ಲಿಕ್ ಗುಡ್ಡದ ಕ್ರಾಸ್ ಬಳಿ ರಸ್ತೆ ಮಧ್ಯ ಮರಳು ತುಂಬಿದ ಲಾರಿಯನ್ನ ಪೋಲಿಸ್ ಸಿಬ್ಬಂದಿ ತಡೆದು ತಪಾಸಣೆ ಮಾಡುತ್ತಿದ್ದ ವೇಳೆ ಶೀತಾಲಹರಿ ಗ್ರಾಮದಿಂದ ವಾರದ ಸಂತೆಗೆ ಹೋಗುತ್ತಿದ್ದ ಬೈಕ್ ಅಪಘಾತ ನಡೆದಿದೆ. ಈ ಅಪಘಾತಕ್ಕೆ ಪೋಲಿಸ್ ಪೆದೆ ಲಾರಿಯನ್ನ ತಡೆದು ನಿಲ್ಲಿಸಿದ್ದೇ ಕಾರಣ ಎಂದು ಶೀತಾಲಹರಿ ಗ್ರಾಮಸ್ಥರು ಆರೋಪಿಸಿದರು. ಅಲ್ಲದೇ ಕೆಲ ಹೊತ್ತು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಅಪಘಾತ ನಡೆದ ನಂತರವೂ ಲಾರಿಯಯನ್ನ ಪೆದೆ ಬಿಟ್ಟು ಕಳುಹಿಸಿದ್ದು ತಾನು ಪರಾರಿಯಾಗಿದ್ದಾನೆ, ಎಂದು ಗಂಭೀರ ಆರೋಪ ಮಾಡಿದರು. ನಂತರ ಸ್ಥಳಕ್ಕೆ ಬಂದ ಸಿಪಿಐ ಜಯಂತ ಗೌಳಿ, ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟರ ಪರಿಸ್ಥಿತಿ ತಿಳಿಗೊಳಿಸಿದರು.
ಘಟನೆ ಸಂಬಂಧ ಗುರುವಾರ ಸ್ಥಳಕ್ಕೆ ಭೇಟಿನೀಡಿದ್ದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಡಿ. ಮಾತನಾಡಿ, ಲಾರಿ ಬೈಕ್ ಅಪಘಾತಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೋಲಿಸ್ ಪೆದೆ ಮೇಲಿನ ಆರೋಪದ ಹಿನ್ನೆಲೆ ತನಿಖೆಗೆ ಸೂಚಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇವೆ. ಎಂದು ತಿಳಿಸಿದರು.

Exit mobile version