ಸುರೇಶ್ ಲಮಾಣಿ
ಲಕ್ಷ್ಮೇಶ್ವರ: ಕಾಂಕ್ರೀಟ್ ರಸ್ತೆ ಇಲ್ಲದೇ ಸಂಚಾರಕ್ಕೆ ಸಂಚಾಕಾರ ಬಂದಿದೆ ಎಂದು ಪಟ್ಟಣದ ಜನರು ಪಟ್ಟು ಹಿಡಿದ ಪರಿಣಾಮ ಕಾಂಕ್ರೀಟ್ ರಸ್ತೆಯೇನೋ ನಿರ್ಮಾಣ ಮಾಡಿದರು. ಆದರೆ ಕಾಮಗಾರಿ ಕಾಟಾಚಾರಕ್ಕೆ ಮಾಡಿದರಾ ಎನ್ನುವ ಪ್ರಶ್ನೆ ಲಕ್ಷ್ಮೇಶ್ವರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉದ್ಭವವಾಗಿದೆ.
ಪಟ್ಟಣದ ಅಂಬೇಡ್ಕರ್ ನಗರದ ಗದಗ ನಾಕಾದಲ್ಲಿರುವ ಸಿಸಿ ರಸ್ತೆಯ ಕಾಮಗಾರಿ ಮುಗಿದು ಸುಮಾರು 5 ತಿಂಗಳು ಗತಿಸಿದರೂ ಒಂದು ಕಡೆ ಮಾತ್ರ ಪಿವರ್ಸ ಹಾಕಿ ಮತ್ತೊಂದು ಕಡೆ ಹಾಗೆ ಬಿಟ್ಟಿರುವುದರಿಂದ ಅಂಬೇಡ್ಕರ್ ನಗರದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಇದರಿಂದ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗದಗ ನಾಕಾದಲ್ಲಿ ನಿರ್ಮಾಣಗೊಂಡ ಸಿಸಿ ರಸ್ತೆಯು ಎರಡು ಬದಿಯಲ್ಲಿ ಪಿವರ್ಸ ಹಾಕಬೇಕಿತ್ತು. ಆದರೆ ಒಂದೆ ಕಡೆ ಹಾಕಿ ನಮ್ಮ ಅಂಬೇಡ್ಕರ್ ನಗರದ ಬದಿಯಲ್ಲಿ ಹಾಕಿಲ್ಲ. ಇದೊಂದು ರಾಜಕೀಯ ಉದ್ದೇಶವಾಗಿದೆ. ಅಧಿಕಾರಿಗಳು ಆದಷ್ಟೂ ಬೇಗ ನಮ್ಮ ಕಡೆಯಲ್ಲಿ ಬರುವ ಬದಿಯಲ್ಲಿ ಪಿವರ್ಸ ಹಾಕಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು.
ಪಟ್ಟದ ಗದಗ ನಾಕಾದಲ್ಲಿ ನಿರ್ಮಾಣವಾದ ಸಿಸಿ ರಸ್ತೆಯಲ್ಲಿ ಎರಡು ಬದಿಯಲ್ಲಿ ಪಿವರ್ಸ ಹಾಕಬೇಕಿತ್ತು ಆದರೆ ಗುತ್ತಿಗೆದಾರರು ಒಂದೆ ಕಡೆಯಲ್ಲಿ ಪಿವರ್ಸ ಹಾಕಿದ್ದರಿಂದ ಅಂಬೇಡ್ಕರ್ ನಿವಾಸಿಗರಿಗೆ ನೋವುಂಟು ಮಾಡಿದೆ. ಇದು ರಾಜಕೀಯ ಆಟವಾಗಿದೆ. ಇದರಿಂದ ನಮ್ಮ ಕಡೆಯಲ್ಲಿ ಪಿವರ್ಸ ಹಾಕಿಲ್ಲ ಎಂದು ಅಂಬೇಡ್ಕರ್ ನಿವಾಸಿಗರು ಆರೋಪಿಸಿದ್ದಾರೆ.
ಪಟ್ಟಣದ ಗದಗ ನಾಕದ ಸಿಸಿ ರಸ್ತೆಯೂ ಕೆಲಸ ಮುಗಿದು ಸುಮಾರು ಐದು ತಿಂಗಳ ಆದರೂ ನಮ್ಮ ಕಡೆ ಪಿವರ್ಸ ಹಾಕದೆ ಇರೋದಕ್ಕೆ ಕಾರಣ ಏನು? ಗುತ್ತಿಗೆದಾರರಿಗೆ ಕೇಳಿದರೆ ನಮಗೆ ಅನುದಾನ ಮುಗಿದಿದೆ ಎಂದು ಹೇಳುತ್ತಾರೆ. ಇದೊಂದು ರಾಜಕೀಯ ಪ್ರಯೋಗವಾಗಿದೆ ಎಂದು ಅಂಬೇಡ್ಕರ್ ನಿವಾಸಿಗರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ತೋರಬೇಕು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎನ್ನುವುದು ಸ್ಥಳೀಯರ ಆರೋಪವಾಗಿದೆ.
