ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ : ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಮೇಘನ್.ಎಚ್.ಕೆ

Meghan h k

ರಾಜ್ಯ: ಸೆ.12ರಂದು  ನೀಟ್ ಪರೀಕ್ಷೆಯು ರಾಜ್ಯಾದ್ಯಂತ 202 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, ಒಟ್ಟು 16.1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೆ ಸೋಮವಾರ ಸಂಜೆ ನೀಟ್ ಫಲಿತಾಂಶವನ್ನು ಪ್ರಕಟಿಸಿದೆ.

ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) 2021ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ (ಎಐಆರ್) 5ನೇ ರ್ಯಾಂಕ್​ ಪಡೆಯುವ ಮೂಲಕ ಕರ್ನಾಟಕ ಟಾಪರ್ ಎಂಬ ಕೀರ್ತಿ ಪಡೆದಿದ್ದಾರೆ.

ಎಚ್.ಕೆ.ಮೇಘನ್: ನೀಟ್ ಪರೀಕ್ಷೆಯಲ್ಲಿ 5ನೇ ರ್ಯಾಂಕ್​ ಬಂದಿರುವುದು ಸಂತಸವನ್ನು ತಂದಿದೆ. ದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಬೇಕು ಎಂದುಕೊಂಡಿದ್ದೇನೆ. ವೈದ್ಯನಾಗಬೇಕೆಂಬ ಕನಸು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಪ್ರೌಢಶಾಲೆಗೆ ಬಂದ ತಕ್ಷಣವೇ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಕರೊನಾ ರಜೆ ಸಿಕ್ಕ ಕಾರಣ ಓದಲು ಮತ್ತಷ್ಟು ಅವಕಾಶ ಸಿಕ್ಕಂತಾಯಿತು. ಈ ಸಾಧನೆಗೆ ಎಲ್ಲ ಪ್ರೋತ್ಸಾಹ ನೀಡಿದ ನನ್ನ ಪಾಲಕರಿಗೆ ಹಾಗೂ ಉಪನ್ಯಾಸಕರಿಗೆ ಧನ್ಯವಾದಗಳು ಎಂದು ಹೇಳಿದರು.

Exit mobile version