ನೀಟ್ ಫಲಿತಾಂಶದ ಯಡವಟ್ಟು, ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ನವದೆಹಲಿ : ನೀಟ್ ನ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. 

ವೈದ್ಯೆಯಾಗಬೇಕೆಂದು ಕನಸು ಕಂಡು ಹಗಲಿರುಳು ಕಷ್ಟ ಪಟ್ಟು ಓದಿದ್ದ ವಿದ್ಯಾರ್ಥಿನಿ ಉತ್ತಮ ಅಂಕ ಗಳಿಸು ನರೀಕ್ಷೆಯಲ್ಲಿದ್ದಳು. ಆದರೆ, ನೀಟ್ ನ ಯಡವಟ್ಟಿನಿಂದಾಗಿ ಈಗ ಈ ವಿದ್ಯಾರ್ಥಿ ಇಹಲೋಕ ತ್ಯಜ್ಸಿದ್ದಾಳೆ. 

ಮಧ್ಯಪ್ರದೇಶದ ವಿಧಿ ಸೂರ್ಯವಂಶಿ ನೀಟ್ ಪರೀಕ್ಷೆ ಬರೆದ್ದರು. ಅಲ್ಲದೇ, ಫಲಿತಾಂಶಕ್ಕಾಗಿ ಕಾಯ್ದು ಕುಳಿತಿದ್ದಳು. ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟವಾಗಿತ್ತು. ಆದರೆ, ಫಲಿತಾಂಶದಲ್ಲಿ ವಿಧಿಗೆ ಕೇವಲ 6 ಅಂಕಗಳು ಮಾತ್ರ ಬಂದಿದ್ದವು. 

ಇದರಿಂದಾಗಿ ವಿಧಿ ತೀವ್ರ ಆತಂಕಕ್ಕೆ ಈಡಾಗಿದ್ದಳು. ಅಲ್ಲದೇ, ವಿಧಿಯ ಕುಟುಂಬಸ್ಥರಿಗೆ ಕೂಡ ಇದನ್ನು ನಂಬಲ್ಲು ಆಗಿಲ್ಲ. ರಿಂದ ಮಾನಸಿಕವಾಗಿ ಆಘಾತಕ್ಕೊಳಗಾದ ವಿಧಿ ಕೂಡಲೇ ತನ್ನ ರೂಮಿನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಆದರೆ, ವಿಧಿ ಸೂರ್ಯವಂಶಿಯ ನೀಟ್ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿ ನೋಡಿದಾಗ ವಿಧಿಗೆ 590 ಅಂಕಗಳು ಬಂದಿದ್ದವು. ಆದರೆ, ವಿದ್ಯಾರ್ಥಿನಿ ದುಡುಕಿನ ನಿರ್ಧಾರ ತೆಗೆದುಕೊಂಡು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. 

Exit mobile version