ನೀಟ್ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಇಲ್ಲ ಸ್ಥಾನ!

ನವದೆಹಲಿ : ವೈದ್ಯಕೀಯ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ನೀಟ್‌ ನಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿದ ಒಡಿಶಾದ ಸೋಯೆಬ್ ಅಫ್ತಾಬ್ ಅವರೊಂದಿಗೆ ದೆಹಲಿಯ ಆಕಾಂಕ್ಷ ಸಿಂಗ್ ಸಹ ಅಷ್ಟೇ ಅಂಕ ಗಳಿಸಿದ್ದರೂ ಟಾಪರ್ ಸ್ಥಾನದಿಂದ ಹಿಂದೆ ಸರಿದಿದ್ದಾರೆ.

ಒಂದೇ ಸಮನಾದ ಅಂಕ ಗಳಿಸಿದರೂ ಆಕಾಂಕ್ಷ ಅವರನ್ನು ಟಾಪರ್ ಆಗಿ ಮಾಡಿಲ್ಲ. ಕಾರಣ ಏನೆಂದರೆ ಅಫ್ತಾಬ್ ಗಿಂತ ಆಕಾಂಕ್ಷ ತುಂಬಾ ಚಿಕ್ಕವರು ಎನ್ನುವ ಕಾರಣಕ್ಕೆ. 

ಟೈ-ಬ್ರೇಕಿಂಗ್ ನೀತಿಯು ವಯಸ್ಸು, ವಿಷಯವಾರು ಅಂಕಗಳು ಮತ್ತು ತಪ್ಪಾದ ಉತ್ತರಗಳ ಸಂಖ್ಯೆಯಂತಹ ಅಂಶಗಳನ್ನು ಕೂಡ ಇದಕ್ಕೆ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದ ಸೋಯೆಬ್ ಮತ್ತು ದೆಹಲಿಯ ಆಕಾಂಕ್ಷ ಇಬ್ಬರೂ ನೀಟ್ ಪರೀಕ್ಷೆಯಲ್ಲಿ 720 ಅಂಕಗಳನ್ನು ಗಳಿಸಿದ್ದಾರೆ. 

ಅಫ್ತಾಬ್ ವಯಸ್ಸಿನಲ್ಲಿ ದೊಡ್ಡವನಾಗಿದ್ದ ಕಾರಣ ಅವರು ರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯ ಶ್ರೇಯಾಂಕವನ್ನು ಮೊದಲು ನಿರ್ಧರಿಸಲಾಗುತ್ತದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶವನ್ನು ಶುಕ್ರವಾರ ರಾತ್ರಿ ಘೋಷಿಸಲಾಗಿದ್ದು, 7.7 ಲಕ್ಷ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.

ತುಮ್ಮಲಾ ಸ್ನಿಕಿತಾ (ತೆಲಂಗಾಣ), ವಿನೀತ್ ಶರ್ಮಾ (ರಾಜಸ್ಥಾನ), ಅಮ್ರೀಶಾ ಖೈತಾನ್ (ಹರಿಯಾಣ) ಮತ್ತು ಗುತಿ ಚೈತನ್ಯ ಸಿಂಧು (ಆಂಧ್ರಪ್ರದೇಶ) 720 ಅಂಕಗಳಲ್ಲಿ 715 ಅಂಕಗಳನ್ನು ಪಡೆದು ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.

Exit mobile version